ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಬಾಡಿಗೆ ಮನೆಯವರಿಗೆ ಬಿಗ್ ಶಾಕ್: ಒಂದು ಆರ್.ಆರ್. ನಂಬರ್ ಗೆ ಮಾತ್ರ ಫ್ರೀ; 200 ಯೂನಿಟ್ ಮೀರಿದ್ರೆ ಪೂರ್ಣ ಬಿಲ್

ಬೆಂಗಳೂರು: ಗೃಹಜ್ಯೋತಿ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಬಿಡುಗಡೆ ಮಾಡಿದೆ. ಬಾಡಿಗೆ ಮನೆಯವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲವಾಗಿದೆ.

ಒಂದು ಹೆಸರಿನ ಒಂದೇ ಮೀಟರ್ ಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ಹಲವು ಆರ್.ಆರ್. ಸಂಖ್ಯೆ ಹೊಂದಿದ್ದಲ್ಲಿ ಒಂದು ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ. ಹೀಗಾಗಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಉಚಿತ ವಿದ್ಯುತ್ ಯೋಜನೆ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.

ಒಬ್ಬ ವ್ಯಕ್ತಿಯ ಹೆಸರಲ್ಲಿ ಎಷ್ಟೇ ವಿದ್ಯುತ್ ಸಂಪರ್ಕ ಇದ್ದರೂ ಒಂದಕ್ಕೆ ಮಾತ್ರ ಗೃಹಜೋತಿ ಯೋಜನೆ ವಿದ್ಯುತ್ ಉಚಿತವಾಗಿ ಸಿಗಲಿದೆ. ಮನೆ ಮಾಲೀಕ ತನ್ನ ಮನೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುವುದು ನಿಶ್ಚಿತ. ಹೀಗಾಗಿ ಆತನ ಹೆಸರಿನಲ್ಲಿರುವ ಬಾಡಿಗೆ ಮನೆಗಳಿಗೆ ಫ್ರೀ ವಿದ್ಯುತ್ ಸಿಗುವುದಿಲ್ಲ.

ಉಚಿತ ವಿದ್ಯುತ್ ಗೆ ಅರ್ಜಿ:

ಉಚಿತ ವಿದ್ಯುತ್ ಪಡೆಯಲು ಅರ್ಜಿದಾರರು ಎಸ್ಕಾಂ ಕಸ್ಟಮರ್ ಐಡಿಯನ್ನು ಆಧಾರ್ ಗೆ ಜೋಡಣೆ ಮಾಡಬೇಕು.

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.

ಗೃಹಬಳಕೆ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗಲಿದ್ದು, ವಾಣಿಜ್ಯ ಉದ್ದೇಶಗಳಿಗೆ ಅನ್ವಯಿಸುವುದಿಲ್ಲ.

ಉಚಿತ ವಿದ್ಯುತ್ ಬಿಲ್, 200 ಯೂನಿಟ್ ಮೀರಿದರೆ ಪೂರ್ಣ ಬಿಲ್:

ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ನಮೂದಿಸಬೇಕು.

ಗೃಹ ಬಳಕೆದಾರರ ಅರ್ಹ ಮೊತ್ತ ಬಿಲ್ ನಲ್ಲಿ ಕಡಿತಗೊಳಿಸಿ ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್ ಬಿಲ್ ನೀಡಬೇಕು.

ಗ್ರಾಹಕರು ಸಂಬಂಧಿತ ಶುಲ್ಕ ಪಾವತಿಸಬೇಕು.

ಅರ್ಹ ಯೂನಿಟ್ ಅಥವಾ ಮೊತ್ತಕ್ಕಿಂತ ಒಳಗಡೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ನೀಡಬೇಕು.

ಅರ್ಹ ಮತ್ತು ಅಂದರೆ ಕಳೆದ 12 ತಿಂಗಳ ಸರಾಸರಿ ಆಧರಿಸಿ ಶೇಕಡ 10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ.

ಗರಿಷ್ಠ 200 ಯೂನಿಟ್ ಮಿತಿ ನಿಗದಿಪಡಿಸಲಾಗಿದೆ.

ಕಳೆದ ವರ್ಷದ ಸರಾಸರಿ ಮೇಲೆ ಶೇಕಡ 10 ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ ಹೆಚ್ಚುವರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕಿದೆ.

200 ಯೂನಿಟ್ ಗಿಂದ ಹೆಚ್ಚು ವಿದ್ಯುತ್ ಬಳಸಿದಲ್ಲಿ ಪೂರ್ಣ ಬಿಲ್ ಪಾವತಿಸಬೇಕು.

ಬಾಕಿ ಕಟ್ಟದಿದ್ದರೆ ಸಂಪರ್ಕ ಕಡಿತ:

ಜೂನ್ 30ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಶುಲ್ಕದ ಮೊತ್ತವನ್ನು ಮೂರು ತಿಂಗಳಲ್ಲಿ ಪಾವತಿಸಬೇಕು.

ಇಲ್ಲವಾದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ.

ಗೃಹಜ್ಯೋತಿ ಯೋಜನೆಗೆ ಸೇರ್ಪಡೆ:

ಅಮೃತ ಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹಜ್ಯೋತಿ ಯೋಜನೆಯಡಿ ಸೇರಿಸಲಾಗುತ್ತದೆ.

ಒಬ್ಬರಿಗೆ ಒಬ್ಬರ ಹೆಸರಲ್ಲಿ ಹೆಚ್ಚು ಆರ್.ಆರ್. ನಂಬರ್ ಗಳು ಇದ್ದರೆ ಒಂದಕ್ಕೆ ಮಾತ್ರ ಉಚಿತ ವಿದ್ಯುತ್ ಯೋಜನೆ ಅನ್ವಯವಾಗುತ್ತದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲವೆಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read