ಮುಂಬೈ: ಚಿಲ್ಲರೆ ಹಣದುಬ್ಬರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್.ಬಿ.ಐ. ಬಡ್ಡಿದರವನ್ನು ಈ ತಿಂಗಳು ಶೇ. 6.5 ರಷ್ಟು ಇರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜೂನ್ 6 ರಿಂದ 8 ರವರೆಗೆ ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯಲ್ಲಿ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದೆ. ಜೂನ್ 8ರಂದು ದ್ವೈಮಾಸಿಕ ವಿತ್ತ ನೀತಿ ಪ್ರಕಟವಾಗಲಿದೆ.
ಆರ್‌ಬಿಐ ಬಡ್ಡಿ ದರವನ್ನು ಏಪ್ರಿಲ್ ನಲ್ಲಿ ಶೇಕಡ 6.5 ರಷ್ಟು ನಿಗದಿ ಮಾಡಿತ್ತು. ಇದೀಗ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿರುವುದರಿಂದ ಬಡ್ಡಿ ದರ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ 18 ತಿಂಗಳ ಕನಿಷ್ಠ ಶೇಕಡ 4.7 ಕ್ಕೆ ಇಳಿದಿತ್ತು. ಮೇ ತಿಂಗಳ ಸೂಚ್ಯಂಕ ಜೂನ್ 12ರಂದು ಪ್ರಕಟವಾಗಲಿದೆ. ಹಣದುಬ್ಬರ ಇಳಿಕೆಯಾಗಿರುವುದರಿಂದ ಆರ್.ಬಿ.ಐ. ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.