HomeIndiaಜನ ಮೆಚ್ಚುಗೆಗೆ ಪಾತ್ರವಾಗಿದೆ ರೈಲು ದುರಂತದ ವೇಳೆ ‘NDRF’ ಯೋಧ ಮಾಡಿರುವ ಈ ಕೆಲಸ

ಜನ ಮೆಚ್ಚುಗೆಗೆ ಪಾತ್ರವಾಗಿದೆ ರೈಲು ದುರಂತದ ವೇಳೆ ‘NDRF’ ಯೋಧ ಮಾಡಿರುವ ಈ ಕೆಲಸ

ಒಡಿಶಾ ರೈಲು ದುರಂತದಲ್ಲಿ (In a train accident) 280 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರ ಗಾಯಗಳಿಂದ ನರಳುತ್ತಿದ್ದಾರೆ. ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದಾರೆ ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ದುರಂತ ನಡೆದ ಕೆಲವೇ ಕ್ಷಣದಲ್ಲಿ ರೈಲಿನಲ್ಲಿದ್ದ ಯೋಧರೊಬ್ಬರು ದುರಂತ ನಡೆದ ಸ್ಥಳದ ಲೊಕೇಶನ್ ಕಳುಹಿಸುವ ಮೂಲಕ ರಕ್ಷಣಾ ಕಾರ್ಯ (Defense work) ಬೇಗ ಆರಂಭವಾಗಲು ಸಹಾಯ ಮಾಡಿದ್ದಾರೆ. ಎನ್ ಡಿಆರ್ಎಫ್ (NDRF) ಯೋಧ ವೆಂಟೇಶ್ ಎನ್.ಕೆ. ರಜೆಯಲ್ಲಿದ್ದರೂ ತನ್ನ ಜವಾಬ್ದಾರಿ ಅರಿತು ಸಮಯಪ್ರಜ್ಞೆ ತೋರಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ. ದುರಂತ ಬಗ್ಗೆ ಇವರು ಬೇಗನೇ ಮಾಹಿತಿ ನೀಡಿದ್ದು, ಇವರು ಕಳುಹಿಸಿದ ಲೈವ್ ಲೊಕೇಶನ್ ಆಧಾರದ ಮೇಲೆ ರಕ್ಷಣಾ ತಂಡಗಳು Defense team ಬೇಗನೇ ಸ್ಥಳಕ್ಕೆ ತಲುಪಲು ಸಾಧ್ಯವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಯೋಧ ವೆಂಕಟೇಶ್ ರಜೆಯ ಮೇಲೆ ಪಶ್ಚಿಮ ಬಂಗಾಳದ ಹೌರಾದಿಂದ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು. ಅವರ ಬೋಗಿ ಬಿ -7 ಹಳಿತಪ್ಪಿದರೂ ಅದರ ಮುಂದಿರುವ ಬೋಗಿಗಳಿಗೆ ಡಿಕ್ಕಿ ಹೊಡೆಯದ ಕಾರಣ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಮೂರನೇ ಎಸಿ ಬೋಗಿಯಲ್ಲಿದ್ದರು ಮತ್ತು ಅವರ ಸೀಟ್ ಸಂಖ್ಯೆ 58 ಆಗಿತ್ತು. ಅದೃಷ್ಟಕ್ಕೆ ಇವರಿದ್ದ ಬೋಗಿಯು ಮುಂದಿನ ಕೋಚ್ಗಳಿಗೆ ಡಿಕ್ಕಿ ಹೊಡೆಯಲಿಲ್ಲ. ಹಾಗಾಗಿ ದುರಂತದಿಂದ ಇವರು ಪಾರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular