ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸರ್ಕಾರದಿಂದ ಶಾಲಾ ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಿದ್ದು, ಜೂನ್ 6 ರಿಂದ ಜುಲೈ 31ರೊಳಗೆ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಶಿಕ್ಷಣ ಇಲಾಖೆಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಚುನಾವಣೆ ಕಾರಣದಿಂದಾಗಿ ಮುಂದೂಡಲಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ಅನುಮತಿ ನೀಡಿದ್ದು, ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
2022ರ ಡಿಸೆಂಬರ್ 26ರಂದು ಹೊರಡಿಸಲಾದ ವೇಳಾಪಟ್ಟಿಯ ಪ್ರಕಾರ ಉಳಿದ ಎಲ್ಲಾ ಮಾರ್ಗಸೂಚಿಗಳು ಯಥಾವತ್ತಾಗಿ ಮುಂದುವರೆಯಲಿದೆ.
ಜೂನ್ 6 ರಿಂದ ಜುಲೈ 31ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಮೊದಲಿಗೆ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹಂಚಿಕೆ ಕೌನ್ಸಿಲಿಂಗ್ ನಡೆಯಲಿದೆ.
ಜೂನ್ 6 ರಂದು ಕರಡು ಪ್ರತಿ ಪ್ರಕಟಿಸಲಿದ್ದು, ಜೂನ್ 10 ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ.
ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಜೂನ್ 17ರಿಂದ ಕೌನ್ಸೆಲಿಂಗ್ ಆರಂಭವಾಗಲಿದ್ದು, ಹೆಚ್ಚುವರಿ ಶಿಕ್ಷಕರ ಮರು ಹಂಚಿಕೆ ಕೌನ್ಸಿಲಿಂಗ್ ಬ್ಲಾಕ್ ಹಂತದಲ್ಲಿ ಜೂನ್ 20ರಂದು ನಡೆಯಲಿದೆ.
ತಾಂತ್ರಿಕ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಜೂನ್ 8 ರಿಂದ 26ರ ವರೆಗೆ ನಡೆಯಲಿದೆ.
ಜೂನ್ 7ರಿಂದ ಜುಲೈ 7 ರವರೆಗೆ ಸಾಮಾನ್ಯ ಕೋರಿಕೆ ವರ್ಗಾವಣೆ ನಡೆಯಲಿದೆ.
ಜುಲೈ 10 ರಿಂದ 17ರವರೆಗೆ ಜಿಲ್ಲಾ ಹಂತದಲ್ಲಿ ವರ್ಗಾವಣೆ ಕೌನ್ಸಿಲಿಂಗ್ ನಡೆಸಲಾಗುವುದು.
ಜುಲೈ 17 ರಿಂದ 26ರವರೆಗೆ ವಿಭಾಗೀಯ ಹಂತದ ಒಳಗಿನ ವರ್ಗಾವಣೆ ನಡೆಯಲಿದೆ.
ಜುಲೈ 25 ರಿಂದ 31ರವರೆಗೆ ವಿಭಾಗಿಯ ಹಂತದ ಹೊರಗಿನ ವರ್ಗಾವಣೆ ನಡೆಯಲಿದೆ.
ವರ್ಗಾವಣೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಹೆಚ್ಚುವರಿ ಶಿಕ್ಷಕರ ಅರ್ಹತೆ ಸಲ್ಲಿಸುವಾಗ ವಿನಾಯಿತಿ, ಆದ್ಯತೆ ಕೋರಿ ಸಲ್ಲಿಸುವ ದಾಖಲೆ ಮತ್ತು ಇತರೆ ಸೇವಾ ಮಾಹಿತಿಯನ್ನು ಅಪ್ಲೋಡ್ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ತಪ್ಪಾಗಿ ಅರ್ಜಿ ಸಲ್ಲಿಕೆ ಸರಿಯಾದ ದಾಖಲೆ ಅಪ್ಲೋಡ್ ಮಾಡದಿದ್ದಲ್ಲಿ ಪರಿಷ್ಕರಣೆಗೆ ಅವಕಾಶ ಇರುವುದಿಲ್ಲ. ವಿವರಗಳಿಗಾಗಿ www.school education.kar.nic.in ವೆಬ್ಸೈಟ್ ಗಮನಿಸಬಹುದಾಗಿದೆ.