ಬೆಂಗಳೂರು : ಬೆಂಗಳೂರು ಜಿಲ್ಲಾ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ಕಡಿತ ಮಾಡುವುದಾಗಿ ಘೋಷಣೆ ಮಾಡಿದೆ.
ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಲೀಟರ್ಗೆ 1.50 ರೂ. ಕಡಿತ ಮಾಡುವುದಾಗಿ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹೇಳಿದೆ. ಈ ಮೂಲಕ ರೈತರಿಗೆ ಹಾಲು ಒಕ್ಕೂಟ ಶಾಕ್ ನೀಡಿದೆ.
ಬೆಂಗಳೂರು ಜಿಲ್ಲಾ ಹಾಲು ಒಕ್ಕೂಟ ಬೇಸಿಗೆ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂ. ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು. ಆದರೆ ಈ ಪ್ರೋತ್ಸಾಹಧನ ಏಪ್ರಿಲ್ ತಿಂಗಳ 1ರಿಂದ ಮೆ ತಿಂಗಳ 31ರವರೆಗೆ ಮಾತ್ರ ಅನ್ವಯವಾಗಿತ್ತು.