ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ `ಷರತ್ತುಗಳು ಅನ್ವಯ’, ಯಾವುದೇ ಷರತ್ತುಗಳಿಲ್ಲದೇ ಸರ್ಕಾರಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ‘ಷರತ್ತುಗಳನ್ನೇ ವಿಧಿಸದೇ ಯಾವುದೇ ಸರ್ಕಾರಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಪಿಎಲ್ ಕಾರ್ಡ್ ಪಡಿತರದಾರರಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ. 5 ಗ್ಯಾರಂಟಿ ಯೋಜನೆಗಳ (Congress Guarantee ) ಬಗ್ಗೆ ಚರ್ಚೆ ನಡೆಸಿ ಇಂದು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಆರ್ಥಿಕ ನೀಲನಕ್ಷೆ, ಅನುಷ್ಠಾನದ ಬಗ್ಗೆ ಹಾಗೂ ಆಯಾ ಇಲಾಖೆಗಳ ನಿಯಮದ ಆಧಾರದಲ್ಲಿ ಚರ್ಚೆ ಆಗಲಿದೆ. ನಂತರ ಗ್ಯಾರೆಂಟಿ ಯೋಜನೆ ಜಾರಿಗೊಳಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ( Priyank Kharge) ಹೇಳಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆ ಬಳಿಕ 5 ಗ್ಯಾರಂಟಿ ಯೋಜನೆ ಘೋಷಣೆ ಕುರಿತು ಸರ್ಕಾರ ಮಹತ್ಗದ ನಿರ್ಧಾರ ಪ್ರಕಟಿಸಲಿದೆ. ಇಂದಿನ ಸಚಿವ ಸಂಪುಟ ಸಭೆ ಬಹಳ ಕುತೂಹಲ ಮೂಡಿಸಿದೆ.