ಗರಿಗರಿಯಾದ, ಕುರುಕಲಾದ, ರುಚಿಕರವಾದ ಬಗೆಬಗೆಯ ದೋಸೆಯು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿದೆ. ಇದನ್ನ ಬಹುತೇಕ ಪ್ರತಿಯೊಬ್ಬ ಆಹಾರಪ್ರಿಯರು ಇಷ್ಟಪಡುತ್ತಾರೆ.
ಮೈಸೂರು ಮಸಾಲಾದಿಂದ ರವಾ ದೋಸೆಯವರೆಗೆ ಬಗೆ ಬಗೆಯ ದೋಸೆಗಳು ಸಿಗುತ್ತವೆ. ವಿಲಕ್ಷಣ ಸಂಯೋಜನೆಯಲ್ಲಿ ವ್ಯಕ್ತಿಯೊಬ್ಬರು ಪಾನ್ ದೋಸೆ ಮಾಡುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಫ್ಲೋರೊಸೆಂಟ್ ಹಸಿರು ಬಣ್ಣದ ಖಾದ್ಯ ಇಂಟರ್ನೆಟ್‌ನಲ್ಲಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ.
ಟ್ವಿಟರ್‌ನಲ್ಲಿ ಹ್ಯಾಪಿ ಎಂಬ ಹೆಸರಿನ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಎರಡು ನಿಮಿಷಗಳ ಅವಧಿಯ ವೀಡಿಯೊದಲ್ಲಿ ಬಾಣಸಿಗ ಪಾನ್ ಅಥವಾ ವೀಳ್ಯದಿಂದ ತಯಾರಿಸಿದ ಹಸಿರು ಬಣ್ಣದ ದೋಸೆ ಹಿಟ್ಟನ್ನ ತವಾ ಮೇಲೆ ಸುರಿದು ಪಾನ್ ದೋಸೆ ತಯಾರಿಸುತ್ತಾರೆ.
ಬೆಣ್ಣೆ, ಪಾನ್, ಚೆರ್ರಿ, ಒಣದ್ರಾಕ್ಷಿ, ಖರ್ಜೂರ, ಅಂಜೂರದ ಹಣ್ಣುಗಳು, ಒಣ ಹಣ್ಣುಗಳನ್ನು ಸೇರಿಸಿ ದೋಸೆ ತಯಾರಿಸಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಹಲವು ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ ಮತ್ತು ಇಂತಹ ವಿಚಿತ್ರ ಸಂಯೋಜನೆಗಳ ಅಗತ್ಯವೇನೆಂದು ಜನರು ಪ್ರಶ್ನಿಸುತ್ತಿದ್ದಾರೆ. ವೀಡಿಯೊವನ್ನು ಚಿತ್ರೀಕರಿಸಿದ ಸ್ಥಳವನ್ನು ಇನ್ನೂ ಖಚಿತಪಡಿಸಲಾಗಿಲ್ಲ.
https://twitter.com/happyfeet_286/status/1663515121585655809?ref_src=twsrc%5Etfw%7Ctwcamp%5Etweetembed%7Ctwterm%5E1663515121585655809%7Ctwgr%5E0f8130efbf0199da7b75c9581154b63df2c9455a%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-of-paan-dosa-goes-viral-internet-in-disbelief-4085353