ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ತಾನು ನಿವೃತ್ತಿಯಾಗುತ್ತಿರುವ ಮೊದಲು ತನ್ನ ಕೆಲಸದ ಕೊನೆಯ ದಿನದಂದು ಬಸ್ ಅನ್ನು ಅಪ್ಪಿ, ಚುಂಬಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ.
ಹೌದು, ಮಧುರೈನ 60 ವರ್ಷದ ಚಾಲಕ ಮುತ್ತುಪಾಂಡಿ ಅವರು ಬಸ್‌ನ ಸ್ಟೀರಿಂಗ್ ಚಕ್ರಕ್ಕೆ ಮುತ್ತಿಟ್ಟು ಕಣ್ಣೀರು ಸುರಿಸಿದ್ದಾರೆ. ಮೂರು ದಶಕಗಳಿಂದ ತಾವು ಮಾಡಿದ ಕೆಲಸಕ್ಕೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಮುತ್ತುಪಾಂಡಿ ಅವರು ಮಧುರೈನ ಅನುಪಾನಡಿ-ತಿರುಪರಂಗುನ್ರಂ-ಮಹಾಲಕ್ಷ್ಮಿ ಕಾಲೋನಿ ಮಾರ್ಗದಲ್ಲಿ ಬಸ್ ಚಲಾಯಿಸಿದ್ದಾರೆ. ತಮ್ಮ ಕೊನೆಯ ಚಾಲನೆಯಲ್ಲಿ ಚಾಲಕ ಮುತ್ತುಪಾಂಡಿ ಸ್ಟೀರಿಂಗ್ ಗೆ ಕೈ ಮುಗಿದು ನಮಸ್ಕರಿಸಿ, ಚುಂಬಿಸಿದ್ದಾರೆ.
ಈ ವೃತ್ತಿಯು ಸಮಾಜದಲ್ಲಿ ನನಗೆ ಗೌರವವನ್ನು ತಂದುಕೊಟ್ಟಿತು. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಮತ್ತು ನನ್ನ ಹೆತ್ತವರು ಮತ್ತು ಹೆಂಡತಿಯನ್ನು ನೋಡಿಕೊಳ್ಳಲು ಸಾಧ್ಯವಾಯಿತು ಎಂದು ಮುತ್ತುಪಾಂಡಿ ಭಾವುಕರಾಗಿ ತಿಳಿಸಿದ್ದಾರೆ.
#கடைசியாஒருமுறை… ஓய்வு பெறும் நாளில் நெகிழ்ச்சி… #பேருந்தை கட்டிப்பிடித்து அழுத ஓட்டுநர் #முத்துப்பாண்டி..@CMOTamilnadu @sivasankar1ss @kalilulla_it @abm_tn @rajakumaari @DonUpdates_in @PTRajkumar97899 @Vel_Vedha pic.twitter.com/pFjkbOcnnG
— Nowshath A (@Nousa_journo) June 1, 2023

