ಜವಾನ ವೃತ್ತಿಯಿಂದ ಜನನಾಯಕ: ಬೆಲ್ ಬಾರಿಸಿ ಕೆಲಸ ಆರಂಭಿಸಿದ ಶಾಸಕ

ದಾವಣಗೆರೆ: 32 ವರ್ಷ ಜವಾನರಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಜಗಳೂರು ಕ್ಷೇತ್ರದ ಶಾಸಕರಾಗಿರುವ ಬಿ. ದೇವೇಂದ್ರಪ್ಪ ಅಮರಾವತಿ ವಿದ್ಯಾಕೇಂದ್ರದಲ್ಲಿ ಕಚೇರಿ ಬೀಗ ತೆಗೆದು ಕಸಗೂಡಿಸಿ ಬೆಲ್ ಬಾರಿಸುವುದರೊಂದಿಗೆ ತಮ್ಮ ಕೆಲಸ ಆರಂಭಿಸಿದ್ದಾರೆ.

ಜಗಳೂರಿನ ಅಮರ ಭಾರತಿ ವಿದ್ಯಾಕೇಂದ್ರಕ್ಕೆ ಆಗಮಿಸಿದ್ದ ಶಾಸಕರು ಕಚೇರಿಯ ಬೀಗ ತೆಗೆದು ಗಂಟೆ ಬಾರಿಸಿ ಕಸ ಗುಡಿಸಿ ಹಾಜರಿ ಪುಸ್ತಕಕ್ಕೆ ಸಹಿ ಮಾಡಿ ಪ್ರಾರ್ಥನೆ ಮಾಡುವ ಮೂಲಕ ತಮ್ಮ ಕಾರ್ಯ ಆರಂಭಿಸಿದ್ದಾರೆ.

ನನ್ನ ಪಾಲಿನ ದೈವ ದಿ. ಟಿ. ತಿಪ್ಪೇಸ್ವಾಮಿ ಅವರನ್ನು ನೆನೆದು ಕೆಲಸ ಮಾಡುತ್ತೇನೆ. ಬಡತನದಲ್ಲಿ ಜನಿಸಿದ ನನಗೆ ತಂದೆ ಡಿ ಗ್ರೂಪ್ ನೌಕರಿ ಕೊಡಿಸಿದ್ದರು. 380 ರೂ. ವೇತನದೊಂದಿಗೆ ತಿಪ್ಪೇಸ್ವಾಮಿ ಜೀವನ ನೀಡಿದರು. ನನ್ನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದರಿಂದ ಮಗ ಐಎಎಸ್ ಉತ್ತೀರ್ಣನಾದ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

ಸರ್ಕಾರದ ಸೌಲಭ್ಯಗಳು ಎಲ್ಲಾ ಅರ್ಹರಿಗೆ ತಲುಪುವಂತೆ ಮಾಡುತ್ತೇನೆ. ಭ್ರಷ್ಟಾಚಾರ ಹೋಗಲಾಡಿಸಿ ಅಭಿವೃದ್ಧಿಯ ಗಂಟೆ ಬಾರಿಸುತ್ತೇನೆ ಎಂದು ದೇವೇಂದ್ರಪ್ಪ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read