ಕಲಬುರಗಿ: ವಿದ್ಯುತ್ ಬಿಲ್ ಬಾಕಿ ಕೇಳಲು ಹೋಗಿದ್ದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರ್ಗಿ ಜಿಲ್ಲೆ ಆಳಂದ ಪಟ್ಟಣದ ಖಾಜಿಗಲ್ಲಿಯಲ್ಲಿ ನಡೆದಿದೆ.
ಜೆಸ್ಕಾಂ ಜೆಇ ಸಿದ್ದರಾಮು, ಲೈನ್ ಮ್ಯಾನ್ ಇಜಾಜ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಡಾಬಾ ಮತ್ತು ಮನೆಯ ಕರೆಂಟ್ ಬಿಲ್ ಅನ್ನು ವಸೀಂ ಎಂಬಾತ ಬಾಕಿ ಉಳಿಸಿಕೊಂಡಿದ್ದ. ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ ಜೆಇ ಮತ್ತು ಲೈನ್ ಮ್ಯಾನ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡು ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಇಬ್ಬರನ್ನೂ ಆಳಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.