ಭಾನುವಾರದಂದು ಹೆಗಲತ್ತಿ ಗ್ರಾಮಕ್ಕೆ ಬೈಕ್ ರೈಡ್

ಶಿವಮೊಗ್ಗ: ಶಿವಮೊಗ್ಗ ಬೈಕ್ ಕ್ಲಬ್ ವತಿಯಿಂದ ಜೂ.11ರ ಭಾನುವಾರ ಮಂಡಗದ್ದೆ ಸಮೀಪವಿರುವ ಹೆಗಲತ್ತಿ ಗ್ರಾಮಕ್ಕೆ ಬೈಕ್ ರೈಡ್ ಏರ್ಪಡಿಸಲಾಗಿದೆ.

ಕಂಬದಲ್ಲಿ ಮೂಡಿರುವ ನರಸಿಂಹ ದೇವಸ್ಥಾನ, ನಾಗಯಕ್ಷೆ ದೇವಸ್ಥಾನ, ಭೀಮನ ಪಾದ, ಕೃಷ್ಣನ ತೊಟ್ಟಿಲು ಹಾಗೂ ಗವಿ ಸಿದ್ಧೇಶ್ವರ ದೇವಸ್ಥಾನವನ್ನು ನೋಡಿ ಬರುವುದು.

ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹೋಟೆಲ್ ಮಥುರಾ ಪ್ಯಾರಡೈಸ್ ನಿಂದ ಹೊರಟು ಸಂಜೆ 5 ಗಂಟೆಗೆ ವಾಪಾಸು ಬರಲಾಗುವುದು.

100 ಸಿಸಿ ಮೇಲ್ಪಟ್ಟು ಬೈಕ್ ಅಥವಾ ಸ್ಕೂಟಿ ತರತಕ್ಕದ್ದು. ವಾಹನದ ಎಲ್ಲಾ ದಾಖಲೆ ಜೊತೆಗೆ ತರಬೇಕು. ಒಂದು ವಾಹನದಲ್ಲಿ ಇಬ್ಬರು ಬರಬಹುದು. ಶುಲ್ಕ ಒಬ್ಬರಿಗೆ ರೂ. 250 ನಿಗದಿಪಡಿಸಲಾಗಿದೆ. 50 ಬೈಕ್‌ಗಳಿಗೆ ಮಾತ್ರ ಅವಕಾಶ, ಮೊದಲು ಹೆಸರು ನೊಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅ.ನಾ.ವಿಜಯೇಂದ್ರ ರಾವ್, 9448790127 ಅಥವಾ ಎಸ್.ಎಸ್.ವಾಗೀಶ್ 9844809533 ಇವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಬೈಕ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ಕೋರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read