ಕೋಲಾರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಕನ್ನಘಟ್ಟ ಸಮೀಪ ನಡೆದಿದೆ.
ಜನಪದ ಗಾಯಕ ಜನ್ನಘಗಟ್ಟ ಕೃಷ್ಣಮೂರ್ತಿ ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜನ್ನಘಟ್ಟ ಕೃಷ್ಣಮೂರ್ತಿ ಅವರ ಪತ್ನಿ ಸೌಮ್ಯಾ, ಆಕೆಯ ಪ್ರಿಯಕರ ಶ್ರೀಧರ ಮತ್ತು ಆತನ ಸ್ನೇಹಿತ ಶ್ರೀಧರ್ ಎಂಬುವರನ್ನು ಕೋಲಾರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಜನ್ನಘಟ್ಟ ಕೃಷ್ಣಮೂರ್ತಿ ಅವರನ್ನು ಕೊಲೆ ಮಾಡಿ ದ್ವಿಚಕ್ರ ವಾಹನದಿಂದ ಬಿದ್ದು ಮೃತಪಟ್ಟಿರುವಂತೆ ಬಿಂಬಿಸಲು ಪ್ರಯತ್ನ ನಡೆಸಿದ್ದರು. ಜನಪದ ಕಲಾವಿದರಾದ ಜನ್ನಘಟ್ಟ ಕೃಷ್ಣಮೂರ್ತಿ ಅವರು ಕೋಲಾರ ಜಾನಪದ ಕಲಾಸಂಘದ ಅಧ್ಯಕ್ಷರಾಗಿದ್ದರು. ಮಾನವ ಹಕ್ಕುಗಳ ಜಾಗೃತ ಸಮಿತಿಯ ಸಾಂಸ್ಕೃತಿಕ ಶಾಖೆ ರಾಜ್ಯಾಧ್ಯಕ್ಷರಾಗಿದ್ದರು. ಅವರಿಗೆ ರಾಜ್ಯ ಯುವ ಪ್ರಶಸ್ತಿ ಲಭಿಸಿದೆ.