alex Certify ಈ ಅಭ್ಯಾಸಗಳು ನಿಮ್ಮ ಕಾಲುಗಳನ್ನು ದುರ್ಬಲಗೊಳಿಸಬಹುದು, ಎಚ್ಚರದಿಂದಿರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅಭ್ಯಾಸಗಳು ನಿಮ್ಮ ಕಾಲುಗಳನ್ನು ದುರ್ಬಲಗೊಳಿಸಬಹುದು, ಎಚ್ಚರದಿಂದಿರಿ…!

ಕಾಲುಗಳು ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಅದಕ್ಕಾಗಿಯೇ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಜನರು ತಮ್ಮ ಸಂಪೂರ್ಣ ದೇಹದ ಬಗ್ಗೆ ಕಾಳಜಿ ವಹಿಸುತ್ತಾರೆ,  ಪಾದಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ತಪ್ಪು ಅಭ್ಯಾಸಗಳಿಂದಾಗಿ ಪಾದಗಳಿಗೆ ಹಾನಿಯುಂಟಾಗಬಹುದು.

ದೀರ್ಘಕಾಲ ಕುಳಿತೇ ಇರುವುದು

ಇತ್ತೀಚಿನ ದಿನಗಳಲ್ಲಿ ಜನರು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಆದರೆ ಇದು ನಿಮ್ಮ ಪಾದಗಳಿಗೆ ಹಾನಿ ಮಾಡುತ್ತದೆ. ಏಕೆಂದರೆ ಹೆಚ್ಚು ಹೊತ್ತು ಕುಳಿತಾಗ ರಕ್ತ ಪರಿಚಲನೆ ತುಂಬಾ ನಿಧಾನವಾಗುತ್ತದೆ. ಇದರಿಂದ ಉಬ್ಬಿರುವ ರಕ್ತನಾಳಗಳ ಸಮಸ್ಯೆ ಕಾಡಬಹುದು. ಕಾಲುಗಳು ಆರೋಗ್ಯವಾಗಿರಬೇಕೆಂದು ಬಯಸಿದರೆ, ಕೆಲಸದ ನಡುವೆ ಪ್ರತಿ ಗಂಟೆಗೆ ಒಂದು ಸಣ್ಣ ವಿರಾಮ ತೆಗೆದುಕೊಳ್ಳಿ, ಸ್ವಲ್ಪ ವಾಕ್‌ ಮಾಡಿ.

ಅಡ್ಡ ಕುಳಿತುಕೊಳ್ಳುವುದು

ಈ ಅಭ್ಯಾಸವು ಹೆಚ್ಚಿನವರಲ್ಲಿ ಕಂಡುಬರುತ್ತದೆ. ಕುಳಿತಾಗಲೆಲ್ಲಾ ಕಾಲುಗಳನ್ನು ಅಡ್ಡವಿಟ್ಟುಕೊಳ್ಳುತ್ತಾರೆ. ಇದು ಮೊಣಕಾಲುಗಳ ಮೇಲೆ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ನಿಮ್ಮ ಪಾದಗಳಲ್ಲಿ ಸಮಸ್ಯೆ ಉಂಟಾಗಬಹುದು.

ಅತಿಯಾದ ವ್ಯಾಯಾಮ ಮಾಡುವುದು

ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ನೀವು ಅತಿಯಾದ ವ್ಯಾಯಾಮ ಮಾಡಿದರೆ ಅದು ನಿಮ್ಮ ಪಾದಗಳಿಗೆ ಹಾನಿ ಮಾಡುತ್ತದೆ. ಏಕೆಂದರೆ ಅತಿಯಾದ ವ್ಯಾಯಾಮದಿಂದಾಗಿ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಪಾದಗಳಲ್ಲಿ ನೋವಿನ ಸಮಸ್ಯೆ ಉಂಟಾಗಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...