ನಮ್ಮಲ್ಲಿ ಅನೇಕರಿಗೆ ಹಾರರ್ ಮೂವಿಗಳನ್ನು ನೋಡುವುದು ಭಾರೀ ಇಷ್ಟವಾಗುತ್ತದೆ ಅಲ್ಲವೇ ? 2013ರಲ್ಲಿ ಬಿಡುಗಡೆಯಾದ ’ದಿ ಕಂಜೂರಿಂಗ್’ ಅಂಥದ್ದೇ ಒಂದು ಚಿತ್ರ.
ಈ ಚಿತ್ರವನ್ನು ಶೂಟ್ ಮಾಡಲಾದ ರೋಡ್ ಐಲ್ಯಾಂಡ್‌ನ ಮನೆಯಲ್ಲಿ ಹಾರರ್ ಮೂವಿ ಅಭಿಮಾನಿಗಳಿಗೆ ಕ್ಯಾಂಪಿಂಗ್ ಅವಕಾಶ ನೀಡಲಾಗಿದೆ. ಜಿಹ್ಯಾಂಪಿಂಗ್ ಎಂಬ ಹೆಸರಿನ ಅನುಭವದಡಿ ಈ ಕ್ಯಾಂಪಿಂಗ್ ಅನುಭವ ಪಡೆಯಬಹುದಾಗಿದ್ದು, ’ಗ್ಹೋಸ್ಟ್ (ದೆವ್ವ) ಹಾಗೂ ಕ್ಯಾಂಪಿಂಗ್’ ಶಬ್ದಗಳನ್ನು ಒಗ್ಗೂಡಿಸಿ ಜಿಹ್ಯಾಂಪಿಂಗ್ ಎಂಬ ಶಬ್ದದ ಅನ್ವೇಷಣೆ ಮಾಡಲಾಗಿದೆ.
14 ಕೋಣೆಯ ಈ ಫಾರ್ಮ್‌ಹೌಸ್‌ನಲ್ಲಿ ಸೂಪರ್ ಹಿಟ್ ಹಾರರ್ ಮೂವಿಯ ಬಹುತೇಕ ಭಾಗಗಳ ಚಿತ್ರೀಕರಣ ಮಾಡಲಾಗಿದೆ. ಪ್ಯಾಟ್ರಿಕ್ ವಿಲ್ಸನ್ ಹಾಗೂ ವೆರಾ ಫಾಮಿಗಾ ಮುಂಚೂಣಿ ಪಾತ್ರದಲ್ಲಿರುವ ಈ ಚಿತ್ರದಲ್ಲಿ, 1971ರಲ್ಲಿ ಜೋಡಿಯೊಂದು ತನ್ನ ಕುಟುಂಬವನ್ನು ದೆವ್ವಗಳಿಂದ ರಕ್ಷಿಸುವ ಕಥಾ ಹಂದರವಿದೆ.
ಜೂನ್‌ನಿಂದ ಅಕ್ಟೋಬರ್ ಒಳಗೆ 20 ದಿನಗಳಲ್ಲಿ ಹೀಗೆ ಕ್ಯಾಂಪಿಂಗ್‌ಗೆ ಅವಕಾಶ ನೀಡುವುದಾಗಿ ಪ್ರಾಯೋಜಕರು ತಿಳಿಸಿದ್ದಾರೆ. 3-4 ಟೆಂಟ್‌ಗಳನ್ನು ಹಾಕಿಕೊಂಡು ಈ ಬಂಗಲೆಯಲ್ಲಿ ಕ್ಯಾಂಪಿಂಗ್ ಮಾಡಬಹುದಾಗಿದೆ.
ಟೆಂಟ್ ಅಥವಾ ಕ್ಯಾರಾವಾನ್‌ನಲ್ಲಿ ಉಳಿಯುವ ಆಯ್ಕೆಗನುಗುಣವಾಗಿ ಇಲ್ಲಿ ಒಂದು ರಾತ್ರಿ ಕಳೆಯಲು $300 (Rs 24,769) ರಿಂದ $400 (Rs 33,025)ವರೆಗೆ ಬೆಲೆ ನಿಗದಿ ಪಡಿಸಲಾಗಿದೆ.