ಮೇ 28ರಂದು ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್ ಕಟ್ಟಡವು ಭಾರತ ಗಣರಾಜ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಲಿದೆ.
ನೂತನ ಸಂಸತ್ ಭವನದ ಮೊದಲ ನೋಟವನ್ನು ಕೇಂದ್ರ ಸರ್ಕಾರ ಶುಕ್ರವಾರ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ.
“ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಪಡುವಂತೆ ಮಾಡುತ್ತದೆ. ಈ ವಿಡಿಯೋ ಸಂಸತ್ ಭವನದ ಝಲಕ್ ನೀಡುತ್ತದೆ. ನನ್ನದೊಂದು ವಿಶೇಷ ವಿನಂತಿ – ಈ ವಿಡಿಯೋವನ್ನು ನಿಮ್ಮ ವಾಯ್ಸ್ ಓವರ್‌ನೊಂದಿಗೆ ಶೇರ್ ಮಾಡಿ, ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. #MyParliamentMyPride. ಬಳಸುವುದನ್ನು ಮರೆಯದಿರಿ,” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ಸಂಸತ್ ಭವನದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಸಂಸತ್ ಭವನದ ಭವ್ಯವಾದ ವಾಸ್ತುಶೈಲಿ, ಅದರ ಒಳಾಂಗಣ, ಉಭಯ ಸದನಗಳ ಮನೆಗಳು ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಟಾಟಾ ಪ್ರಾಜೆಕ್ಟ್ಸ್ ಲಿ ನೇತೃತ್ವದಲ್ಲಿ ನಿರ್ಮಾಣ ಮಾಡಿದ ಈ ನೂತನ ಕಟ್ಟಡವನ್ನು ಅಹಮದಾಬಾದ್ ಮೂಲದ ಎಚ್‌ಸಿಪಿ ಡಿಸೈನ್ ವಿನ್ಯಾಸಗೊಳಿಸಿದ್ದು, ವಾಸ್ತುಶಿಲ್ಪಿ ಬಿಮಲ್ ಪಟೇಲ್ ಯೋಜನೆ ಹಾಗೂ ನಿರ್ವಹಣೆ ಹೊಣೆಗಾರಿಕೆ ನಿಭಾಯಿಸಿದ್ದಾರೆ.