alex Certify Video: ನವವಿವಾಹಿತ ಆಶಿಶ್ ವಿದ್ಯಾರ್ಥಿ ಕಲಾವಿದ ಮಾತ್ರವಲ್ಲ ಆಹಾರ ಪ್ರಿಯರೂ ಹೌದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video: ನವವಿವಾಹಿತ ಆಶಿಶ್ ವಿದ್ಯಾರ್ಥಿ ಕಲಾವಿದ ಮಾತ್ರವಲ್ಲ ಆಹಾರ ಪ್ರಿಯರೂ ಹೌದು…!

ಹಿರಿಯ ನಟ ಆಶಿಶ್ ವಿದ್ಯಾರ್ಥಿ ಗುರುವಾರ ಅಸ್ಸಾಂನ ರೂಪಾಲಿ ಬರುವಾ ಅವರನ್ನು ಎರಡನೇ ವಿವಾಹವಾದರು. ರಾಷ್ಟ್ರಪ್ರಶಸ್ತಿ ವಿಜೇತ ನಟನಾಗಿರುವ 60 ವರ್ಷದ ಆಶಿಶ್ ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದು ಬಂದಿವೆ.

ಹೌದು, ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಕಲಾವಿದ ಮಾತ್ರವಲ್ಲ ಅವರು ಆಹಾರಪ್ರೇಮಿಯೂ ಹೌದು. ಆಶಿಶ್ ವಿದ್ಯಾರ್ಥಿ ನಟ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಅವರು ಪ್ರಪಂಚದಾದ್ಯಂತದ ವಿಭಿನ್ನ ಭಕ್ಷ್ಯಗಳನ್ನು ಸವಿಯುವ ವಿಡಿಯೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ. ನಾಗ್ಪುರದಲ್ಲಿ ಮಸಾಲೆಯುಕ್ತ ಮಟನ್ ಸಾವೋಜಿ ಕರಿಯಿಂದ ಶ್ರೀಲಂಕಾದಲ್ಲಿ ತಾಜಾ ಜೇನು ಸವಿಯುವವರೆಗೆ ಅವರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಆಶಿಶ್ ದೆಹಲಿಯ ಪ್ರಸಿದ್ಧ ನಟರಾಜ್ ಚೋಲೆ ಭಾತುರೆ ಅವರ ಬೆಂಗಳೂರಿನ ಶಾಖೆಗೆ ಭೇಟಿ ನೀಡಿದ್ರು. ನಟರಾಜ್ ಬೆಂಗಳೂರಿನಲ್ಲಿ ಚೋಲೆ ಭತೂರ್‌ನ ರುಚಿಯನ್ನು ದೆಹಲಿಯ ಪಹರ್‌ಗಂಜ್‌ನಲ್ಲಿರುವ ಶಾಖೆಯಲ್ಲಿರುವಂತೆಯೇ ಹೋಲುತ್ತದೆ ಎಂದು ಆಶಿಶ್ ತಿಳಿಸಿದ್ರು. ಅಲ್ಲದೆ ಪ್ರತಿ ತುಂಡನ್ನು ಸವಿಯುವಾಗಲೂ ಅವರು ಆನಂದಿಸಿದ್ರು.

ರತ್ಲಾಮಿ ಪೋಹಾ ದೇಶಾದ್ಯಂತ ಪ್ರಸಿದ್ಧವಾಗಿದೆ. ಇದಕ್ಕಾಗಿ ಆಶಿಶ್ ರತ್ಲಾಮ್‌ನತ್ತ ಹೋದರು. ಹಬೆಯಿಂದ ಬೇಯಿಸಿದ ಪೋಹಾವನ್ನು ರತ್ಲಾಮ್ ಸೇವ್, ಕತ್ತರಿಸಿದ ಕೊತ್ತಂಬರಿ, ಈರುಳ್ಳಿ ಮತ್ತು ನಿಂಬೆಯೊಂದಿಗೆ ಸವಿದ್ರು. ನಾಗ್ಪುರದ ಜಗದೀಶ್ ಸಾವಜಿ ಭೋಜನಾಲಯದಲ್ಲಿ ಸಾವಜಿ ಮಟನ್ ಖಾದ್ಯವನ್ನು ಸವಿದ್ರು. ಇದು ಅತ್ಯಂತ ಮಸಾಲೆಯುಕ್ತವಾಗಿರುವುದರಿಂದ ಸ್ವಲ್ಪ ಖಾರವಾಯಿತು. ಹೀಗಾಗಿ ಅವರು ರಸಗುಲ್ಲಾವನ್ನು ತಿನ್ನಬೇಕಾಯಿತು. ಈ ಕ್ಲಿಪ್ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಖಾರದ ಭಕ್ಷ್ಯಗಳ ಹೊರತಾಗಿ, ಆಶಿಶ್ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಜೇನುಗೂಡಿನಿಂದ ನೇರವಾಗಿ ಶುದ್ಧ ಜೇನುತುಪ್ಪವನ್ನು ಸವಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...