ಘಟಾನುಘಟಿಗಳಿಗೆ ಬಿಗ್ ಶಾಕ್: ಹಿರಿಯ ನಾಯಕರಿಗೆ ತಪ್ಪಿದ ಸಚಿವ ಸ್ಥಾನ: 23 ಮಂದಿಗೆ ಖುಲಾಯಿಸಿದ ಅದೃಷ್ಟ

ಬೆಂಗಳೂರು: ನಾಳೆ 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹಿರಿಯ ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದೆ.

ದೆಹಲಿಯಲ್ಲಿ ಸಂಪುಟ ವಿಸ್ತರಣೆ ಸಂಬಂಧ ಮೂರು ದಿನಗಳಿಂದ ನಡೆದ ಸಭೆಯಲ್ಲಿ ಸಚಿವರ ಪಟ್ಟಿ ಸಿದ್ಧಪಡಿಸಲಾಗಿದ್ದು, ಹಿರಿಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿದೆ.

ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಬಸವರಾಜ ರಾಯರೆಡ್ಡಿ, ಬಿ.ಕೆ. ಹರಿಪ್ರಸಾದ್ ಮೊದಲಾದವರಿಗೆ ಸಚಿವ ಸ್ಥಾನ ಕೈತಪ್ಪಿದೆ.

ಉತ್ತರ ಕನ್ನಡ ಜಿಲ್ಲೆಯ ಹಿರಿಯ ನಾಯಕರಾಗಿರುವ ಆರ್.ವಿ. ದೇಶಪಾಂಡೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು, ಸ್ಪೀಕರ್ ಹುದ್ದೆ ನಿರಾಕರಿಸಿ ಸಚಿವ ಸ್ಥಾನ ಬಯಸಿದ್ದರು. ಅವರಿಗೆ ಸಚಿವ ಸ್ಥಾನ ತಪ್ಪಿದೆ. ವಿಧಾನಪರಿಷತ್ ವಿಪಕ್ಷ ನಾಯಕರಾಗಿದ್ದ ಬಿ.ಕೆ. ಹರಿಪ್ರಸಾದ್ ಅವರಿಗೂ ಸಚಿವ ಸ್ಥಾನ ಮಿಸ್ ಆಗಿದೆ.

ಹಿರಿಯ ಶಾಸಕ ಶಿರಾ ಕ್ಷೇತ್ರದ ಟಿ.ಬಿ. ಜಯಚಂದ್ರ, ಧಾರವಾಡದ ಶಾಸಕ ವಿನಯ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಬಿ.ಕೆ. ಸಂಗಮೇಶ್ ಅವರಿಗೂ ಸಚಿವ ಸ್ಥಾನ ತಪ್ಪಿದ್ದು, 23 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನೂತನ ಸಚಿವರ ಪಟ್ಟಿ:

ಕೃಷ್ಣ ಬೈರೇಗೌಡ

ದಿನೇಶ ಗುಂಡೂರಾವ್

ಸಂತೋಷ್ ಲಾಡ್

ಎಂಸಿ ಸುಧಾಕರ

ಲಕ್ಷ್ಮಿ ಹೆಬ್ಬಾಳ್ಕರ್

ಹೆಚ್ ಕೆ ಪಾಟೀಲ್

ಡಾ. ಶರಣ ಪ್ರಕಾಶ ಪಾಟೀಲ್

ಈಶ್ವರ ಖಂಡ್ರೆ

ರಹಿಮ್ ಖಾನ್

ಬಿ ನಾಗೇಂದ್ರ

ಮಂಕಾಳು ವೈದ್ಯ

ಮಧು ಬಂಗಾರಪ್ಪ

ಬೋಸರಾಜು

ಕೆಎನ್ ರಾಜಣ್ಣ

ಶಿವಾನಂದ ಪಾಟೀಲ್

ಪಿರಿಯಾಪಟ್ಟಣ ವೆಂಕಟೇಶ್

ಎಸ್ ಎಸ್ ಮಲ್ಲಿಕಾರ್ಜುನ

ಸಿ ಪುಟ್ಟರಂಗಶೆಟ್ಟಿ

ಚೆಲುವರಾಯಸ್ವಾಮಿ

ಶಿವರಾಜ ತಂಗಡಗಿ

ಆರ್ ಬಿ ತಿಮ್ಮಾಪುರ

ರುದ್ರಪ್ಪ ಲಮಾಣಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read