ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನು ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಸೋಂಕು ಮತ್ತೆ ಆರ್ಭಟಿಸುತ್ತಿದೆ ಎಂದು ಹೇಳಲಾಗಿದೆ. ಕೋವಿಡ್ ಹೊಸ ರೂಪಾಂತರಿ ಈಗ ಕಾಣಿಸಿಕೊಂಡಿದ್ದು, ಜೂನ್ ಅಂತ್ಯದ ವೇಳೆಗೆ ಇದು ಉತ್ತುಂಗಕ್ಕೆ ತಲುಪುವ ಭೀತಿ ವ್ಯಕ್ತವಾಗಿದೆ.
ಕಳೆದ ಏಪ್ರಿಲ್ ನಿಂದ ಚೀನಾದ ನಾಲ್ಕು ಕೋಟಿ ಮಂದಿಯಲ್ಲಿ ಕೋವಿಡ್ ನ ಒಮಿಕ್ರಾನ್ ಉಪ ತಳಿ XBB ಕಾಣಿಸಿಕೊಂಡಿದ್ದು, ಜೂನ್ ಅಂತ್ಯದ ವೇಳೆಗೆ ಇದು 6.5 ಕೋಟಿ ಮಂದಿಗೆ ವ್ಯಾಪಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಅಂತ್ಯಕಾಲ ಸಮೀಪಿಸಿದೆ ಎಂದು ಹೇಳಿದ್ದರ ಮಧ್ಯೆ ಈಗ ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಮತ್ತೆ ಇದರ ಅಬ್ಬರ ಆರಂಭವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಚೀನಾದಲ್ಲಿ ನಡೆಯುವ ವಿದ್ಯಮಾನಗಳು ಹೊರ ಪ್ರಪಂಚಕ್ಕೆ ಗೊತ್ತಾಗದ ಕಾರಣ ಸಾವು ನೋವಿನ ನಿಖರತೆ ಬಹಿರಂಗವಾಗಿಲ್ಲ.