alex Certify ಮದುವೆ ನಂತರ ಮಹಿಳೆಯರು ಇವುಗಳನ್ನು ಧರಿಸಬಾರದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನಂತರ ಮಹಿಳೆಯರು ಇವುಗಳನ್ನು ಧರಿಸಬಾರದು

ಧರ್ಮ, ಜ್ಯೋತಿಷ್ಯದ ಕೆಲವು ವಿಷ್ಯಗಳನ್ನು ಈಗ್ಲೂ ಅನುಸರಿಸಿಕೊಂಡು ಬರಲಾಗ್ತಿದೆ. ಪ್ರತಿ ವಸ್ತು, ದೇಹ, ವ್ಯವಹಾರದ ಬಗ್ಗೆ ಶಾಸ್ತ್ರದಲ್ಲಿ ವಿವರವಿದೆ. ನಮ್ಮ ಕೆಲ ವರ್ತನೆ ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಮಹಿಳೆ ಯಾವ ಆಭರಣಗಳನ್ನು ಮದುವೆ ನಂತ್ರ ಧರಿಸಿದ್ರೆ ಅದು ಒಳ್ಳೆಯದಲ್ಲ ಎಂಬುದನ್ನೂ ಹೇಳಲಾಗಿದೆ.

ಬಿಳಿ ಸೀರೆ ಹಿಂದೂ ಧರ್ಮದಲ್ಲಿ  ಅಶುಭದ ಸಂಕೇತ. ಪತಿ ಸಾನಪ್ಪಿದ ಮಹಿಳೆ ಹಿಂದಿನ ಕಾಲದಲ್ಲಿ ಬಿಳಿ ಸೀರೆಯುಡುತ್ತಿದ್ದಳು. ಹಾಗಾಗಿ ಅದು ಆಕೆಗೆ ಸೀಮಿತ ಎಂಬ ನಂಬಿಕೆಯಿದೆ. ಈಗ್ಲೂ ಅನೇಕರು ಇದನ್ನು ಪಾಲಿಸಿಕೊಂಡು ಬರ್ತಿದ್ದಾರೆ.  ಫ್ಯಾಷನ್‌ ಹೆಸರಿನಲ್ಲಿ ಅನೇಕ ಮಹಿಳೆಯರು ಬಿಳಿ ಸೀರೆಯನ್ನು ಉಡುತ್ತಿದ್ದಾರೆ. ಮಹಿಳೆಯರು ಬಿಳಿ ಸೀರೆಯನ್ನು ಧರಿಸುವುದರಿಂದ ಅವರ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಉಂಟಾಗಬಹುದು. ಅಷ್ಟೇ ಅಲ್ಲದೆ ಗಂಡನ ಜೀವಕ್ಕೂ ಅಪಾಯವುಂಟಾಗಬಹುದು.

ಇನ್ನು ಅನೇಕ ಮಹಿಳೆಯರು ಫ್ಯಾಶನ್ ಗಾಗಿ ಚಿನ್ನದ ಗೆಜ್ಜೆ ಗಳನ್ನು ಧರಿಸುತ್ತಿದ್ದಾರೆ. ಚಿನ್ನದ ಆಭರಣಗಳನ್ನು ಎಂದಿಗೂ ಕಾಲಿಗೆ  ಧರಿಸಬಾರದು. ಚಿನ್ನವನ್ನು ಸೊಂಟಕ್ಕೆ, ಕೈ ಅಥವಾ ಕುತ್ತಿಗೆಗೆ ಮಾತ್ರ ಧರಿಸಬೇಕು. ಕಾಲಿಗೆ ಚಿನ್ನ ಧರಿಸುವುದರಿಂದ ದಾರಿದ್ರ್ಯ ಉಂಟಾಗುತ್ತದೆ. ಮನೆಯ ಪ್ರಗತಿ ಕೂಡಾ ಕುಂಠಿತವಾಗುತ್ತದೆ.

ಕಪ್ಪು ಬಣ್ಣವನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಪ್ಪು ಬಟ್ಟೆಗಳನ್ನು ಧರಿಸಿ ಯಾವುದೇ ಪೂಜಾ ಕಾರ್ಯಕ್ರಮಗಳಿಗೆ  ಹಾಜರಾಗುವಂತಿಲ್ಲ. ಕಪ್ಪು ಬಣ್ಣದ ಬಳೆಗಳನ್ನು ಧರಿಸುವುದು ಸಹ ಅಶುಭವಾಗಿದೆ. ಬಳೆಗಳು ಮಹಿಳೆಯ ಅಲಂಕಾರದ ಒಂದು ಭಾಗವಾಗಿದೆ. ಆದ್ದರಿಂದ ಕಪ್ಪು ಬಳೆ ಧರಿಸುವುದರಿಂದ  ಮನೆಯಲ್ಲಿ ನಕಾರಾತ್ಮಕ ವಾತಾವರಣ ಸೃಷ್ಠಿಯಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...