ತನ್ನ ನಾಜ಼ಿ ಸಿದ್ಧಾಂತದಿಂದ ಲಕ್ಷಾಂತರ ಜನರ ಮಾರಣಹೋಮ ಮಾಡಿ ಇಡೀ ಜಗತ್ತನ್ನು ವಿಶ್ವ ಮಹಾಯುದ್ಧದೆಡೆಗೆ ತಳ್ಳಿದ್ದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಕ್ರೌರ್ಯದ ಕುರಿತಂತೆ ಸಮಾಜದಲ್ಲಿ ಬಹುತೇಕ ಖಡನಾರ್ಹ ಧೋರಣೆಯೇ ಇದೆ. ಆದರೂ ಸಹ ಅಲ್ಲಲ್ಲಿ ಒಂದಷ್ಟು ಮಂದಿ ಹಿಟ್ಲರನ ಧೋರಣೆಗಳನ್ನು ಮೆಚ್ಚುವವರೂ ಇದ್ದಾರೆ.
ಡೆಲಾಯಿಟ್ ಕಂಪನಿಯಲ್ಲಿ ಡಿಸ್ಕ್ ಅಡ್ವೈಸರಿಯಾಗಿ ಕೆಲಸ ಮಾಡುವ ನೀರಭ್ ಮೆಹ್ರೋತ್ರಾ ಹೆಸರಿನ ವ್ಯಕ್ತಿಯೊಬ್ಬರು ಲಿಂಕ್ಡಿನ್ನಲ್ಲಿ ಹಿಟ್ಲರ್ ಕುರಿತು ಸುದೀರ್ಘವಾದ ಪೋಸ್ಟ್ ಒಂದನ್ನು ಹಾಕಿ ಆತನನ್ನು ಪ್ರಶಂಸಿಸುವ ಮೂಲಕ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ.
ಲಾರೆನ್ಸ್ ರೀಲ್ಸ್ ಬರೆದಿರುವ ’ದಿ ಡಾರ್ಕ್ ಚರಿಶ್ಮಾ ಆಫ್ ಅಡಾಲ್ಫ್ ಹಿಟ್ಲರ್’ ಪುಸ್ತಕವನ್ನು ಓದಿದ್ದ ಮೆಹ್ರೋತ್ರಾ, ತಾನು ಆತನಲ್ಲಿನ ಕೆಲವೊಂದು ಆಕರ್ಷಕ ಗುಣಗಳ ಬಗ್ಗೆ ಹೇಳುವುದಾಗಿಯೂ, ಆತ ಒಬ್ಬ ದೂರದೃಷ್ಟಿಯ ಚರಿಷ್ಮಾ ಹೊಂದಿದ್ದವನೆಂದೂ, ಆಕರ್ಷಕ ಮಾತುಗಾರನೆಂದೂ, ಅತೀವವಾದ ಆತ್ಮವಿಶ್ವಾಸಿಯೆಂದು, ಬಹಳ ಬುದ್ಧಿವಂತನೆಂದೂ, ಬಹುದೊಡ್ಡ ಕ್ರಿಯಾಶೀಲನೆಂದೂ ಬರೆದಿದ್ದಾರೆ.
’ಫ್ರೈಡೇ ಇನ್ಸ್ಪಿರೇಷನ್’ ಹೆಸರಿನ ಪೋಸ್ಟ್ನಲ್ಲಿ ಹೀಗೆಲ್ಲಾ ಬರೆದು ಕೊನೆಯಲ್ಲಿ, ’ನಾಜ಼ಿ ಸಲ್ಯೂಟ್ ಹೇಳುವಂತೆ, ಹಿಟ್ಲರನ ಗುಣಗಾನ ಮಾಡಿ,” ಎಂದು ಬರೆದು ಪೋಸ್ಟ್ಗೆ ಅಂತ್ಯ ಹಾಡಿದ್ದಾರೆ.
ಇದಕ್ಕೆ ನೆಟ್ಟಿಗರಿಂದ ತೀವ್ರವಾದ ಪ್ರತಿಕ್ರಿಯೆಗಳು ಬಂದಿವೆ. “ಲಕ್ಷಾಂತರ ಸಣ್ಣ ಮಕ್ಕಳು, ಮಹಿಳೆಯರು ಹಾಗೂ ಪುರುಷರನ್ನು ವಿಷಾನಿಲ ಕೊಟ್ಟು ಕೊಂದವನನ್ನು ಹೊಗಳದೇ ಮತ್ತೇನು. ಡಿಯರ್ ಡೆಲಾಯಿಟ್ ಇಂಡಿಯಾ, ಇಂಥ ವ್ಯಕ್ತಿಗಳನ್ನು ನಿನ್ನ ಕಂಪನಿಯಲ್ಲಿಟ್ಟುಕೊಂಡು ಪೋಷಿಸುತ್ತಿರುವ ನಿನಗೆ ಅಭಿನಂದನೆಗಳು,” ಎಂದು ಸಂದೀಪ್ ಹೆಸರಿನ ನೆಟ್ಟಿಗರೊಬ್ಬರು ತೀವ್ರವಾಗಿ ಖಂಡಿಸಿ ಪೋಸ್ಟ್ ಮಾಡಿದ್ದಾರೆ.
https://twitter.com/sandeep_PT/status/1660580498597445632?ref_src=twsrc%5Etfw%7Ctwcamp%5Etweetembed%7Ctwterm%5E1660580498597445632%7Ctwgr%5E8e902d02a96686d9cb4e432d50a65956c6ff111d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdeloitte-employee-calls-hitler-charismatic-action-taker-deletes-account-after-getting-trolled-2383575-2023-05-24