ಕೋಲ್ಕತ್ತಾ ಮಹಾನಗರದಲ್ಲಿ ಸಲಿಂಗಿ ಜೋಡಿಯೊಂದು ಸಾಂಪ್ರದಾಯಿಕ ಸಮಾರಂಭವೊಂದರಲ್ಲಿ ಹಸೆಮಣೆ ಏರಿದ್ದು, ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಹೊಸ ಆಶಾಕಿರಣ ಮೂಡಿಸಿದೆ.
ಸಾಂಪ್ರದಾಯಿಕ ಬೆಂಗಾಲೀ ಸಮಾರಂಭವೊಂದರಲ್ಲಿ ಸಪ್ತಪದಿ ತುಳಿದ ಈ ಜೋಡಿ, ಅರಿಶಿನ ಶಾಸ್ತ್ರ, ಸಂಗೀತ, ಮೆಹಂದಿ ಹಾಗೂ ಫೇರಾಗಳಂಥ ಶಾಸ್ತ್ರಗಳನ್ನೂ ಪೂರೈಸಿದೆ.
ಮೌಸೊಮಿ ದತ್ತಾ ಹಾಗೂ ಮೌಮಿರಾ ಮಜುಮ್ದಾರ್ ತಮ್ಮ ಈ ಮದುವೆಯ ಮೂಲಕ ಸಮಾನ ಮನಸ್ಕರ ಬಳಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. 2018ರಲ್ಲಿ ಇದೇ ನಗರದಲ್ಲಿ ಸುಚಂದ್ರಾ ದಾಸ್ ಹಾಗೂ ಶ್ರೀ ಮುಖರ್ಜಿ ಎಂಬ ಸಲಿಂಗಿ ಜೋಡಿಗಳು ಮದುವೆಯಾಗುವ ಮೂಲಕ ಈ ಸಂಪ್ರದಾಯಕ್ಕೆ ಚಾಲನೆ ಕೊಟ್ಟಿದ್ದರು.
“ಪ್ರೇಮವೆಂದರೆ ಪ್ರೇಮವಷ್ಟೇ. ನೀವು ಪ್ರೇಮದಲ್ಲಿ ಬಿದ್ದಾಗ ಲಿಂಗದ ವಿಚಾರ ಅಷ್ಟಾಗಿ ಬರುವುದಿಲ್ಲ. ಅದೇನಿದ್ದರೂ ಸರಿಯಾದ ವ್ಯಕ್ತಿ ಹಾಗೂ ಹೃದಯದೊಂದಿಗೆ ಬೆಸುಗೆಯಷ್ಟೇ. ಪ್ರೇಮ ಎಲ್ಲರನ್ನೂ ಸೆಳೆಯುತ್ತದೆ,” ಎಂದು ಮೌಸೊಮಿ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ.