ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಅಸಂಸದೀಯ ಪದಗಳನ್ನು ಬಳಸಿ ಟೀಕೆಗೆ ಗುರಿಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೌಧರಿ ಪ್ರಧಾನಿ ಮೋದಿಯನ್ನ ʼಪಗಲಾ ಮೋದಿʼ ಎಂದು ಟೀಕಿಸಿದರು.
2000 ರೂಪಾಯಿ ನೋಟುಗಳನ್ನು ಹಿಂಪಡೆದ ಸರ್ಕಾರದ ಕ್ರಮವನ್ನು ಟೀಕಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಜನರು ಪ್ರಧಾನಿಯನ್ನು ‘ಪಗಲಾ ಮೋದಿ’ ( ಹುಚ್ಚು ಮೋದಿ ) ಎಂದು ಕರೆಯುತ್ತಾರೆ ಎಂದು ಹೇಳಿದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ನೋಟುಗಳನ್ನು ಹಿಂತೆಗೆದುಕೊಳ್ಳುವ ಕ್ರಮವನ್ನು ಟೀಕಿಸಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಕುಸಿದಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಜನರ ಮೇಲೆ ಹೊರೆ ಬೀಳಲಿದೆ ಎಂದರು.
ದೇಶವಾಸಿಗಳು ಪ್ರಧಾನಿ ಮೋದಿಯವರ ಬಗ್ಗೆ ಹತಾಶರಾಗಿದ್ದಾರೆ ಮತ್ತು ಅವರನ್ನು ‘ಪಗಲಾ ಮೋದಿ’ ಎಂದು ಕರೆಯುತ್ತಿದ್ದಾರೆ ಎಂದರು.