Watch Video | ಸಹೋದರಿ ಸಮಯ ಪ್ರಜ್ಞೆಯಿಂದ ಬದುಕುಳಿದ ಬಾಲಕ

ಶಾಲೆಯ ಕೆಫೆಟೇರಿಯಾದಲ್ಲಿ ಇದ್ದಕ್ಕಿದ್ದಂತೆ ನರಳಾಡುತ್ತಿದ್ದ ತನ್ನ ಸಹೋದರನ ನೆರವಿಗೆ ಆಗಮಿಸಿದ 12 ವರ್ಷದ ಬಾಲೆಯೊಬ್ಬಳು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನನ್ನು ಉಳಿಸಿಕೊಂಡಿದ್ದಾಳೆ.

ಲೀಸೆಸ್ಟರ್‌ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮೊಜ಼ರೆಲ್ಲಾ ಚೀಸ್ ಸವಿಯುತ್ತಿದ್ದ ವೇಳೆ ಮೈಕೈ ಹಿಡಿದುಕೊಂಡಂತೆ ಆಗಿ, ಕೆಮ್ಮು ವಿಪರೀತವಾದ ಕಾರಣ ಚಾರ್ಲಿ ಲವರ್ಮಿ ಒದ್ದಾಡಲು ಆರಂಭಿಸಿದ್ದಾರೆ. ಕೂಡಲೇ ಆತನ ನೆರವಿಗೆ ಬಂದ ಆತನ ಸಹೋದರಿ ಅಮೇಲಿಯಾ ಆತನ ಮೇಲೆ heimlich ಪ್ರಕ್ರಿಯೆ ನಡೆಸಿದ್ದಾಳೆ.

ಚೀಸ್‌ ತಿನ್ನುತ್ತಿದ್ದ ವೇಳೆ ಗಂಟಲಿಗೆ ಸಿಕ್ಕಿಕೊಂಡಂತೆ ಆಗಿ ಚಾರ್ಲಿ ಅದನ್ನು ಕೆಮ್ಮಿ ಹೊರಗೆ ಹಾಕಲು ಯತ್ನಿಸುತ್ತಾನೆ. ಆದರೆ ಈ ಪ್ರಯತ್ನಗಳು ಫಲಗೂಡದೇ ಆತ ಒದ್ದಾಡಲು ಆರಂಭಿಸುತ್ತಾನೆ. ತಕ್ಷಣ ಆತನನ್ನು ಹಿಂದಿನಿಂದ ಬಿಗಿಯಾಗಿ ತಬ್ಬಿ, ಹಾಗೇ ಮೇಲೆತ್ತುವ ಮೂಲಕ ಗಂಟಲಿಗೆ ಸಿಕ್ಕಿಕೊಂಡಿದ್ದ ಪದಾರ್ಥವನ್ನು ಹೊರಬರುವಂತೆ ಮಾಡುತ್ತಾಳೆ ಚಾರ್ಲಿಯ ಸಹೋದರಿ.

ಘಟನೆಯ ಸಿಸಿ ಟಿವಿ ತುಣುಕನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿರುವ ’ನೌದಿಸ್‌ನ್ಯೂಸ್’ ಹೆಸರಿನ ಚಾನೆಲ್ ಒಂದು, ಬಾಲಕಿಯ ಸಮಯ ಪ್ರಜ್ಞೆಯನ್ನು ಕೊಂಡಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read