ಗೋವಾ: ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡಹಗಲೇ ಮನೆಯ ಹೊರಗೆ ಬೆಂಚಿನ ಮೇಲೆ ಕುಳಿತಿದ್ದ ವೃದ್ಧೆಯೊಬ್ಬರ ಚಿನ್ನದ ಸರ ದೋಚಿರುವ ಘಟನೆ ಗೋವಾದ ಲೋಟೌಲಿಮ್ನಲ್ಲಿ ನಡೆದಿದೆ.
ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧೆ ಬೆಂಚ್ ಮೇಲೆ ಕುಳಿತಿದ್ದಾಗ ಇಬ್ಬರು ದರೋಡೆಕೋರರು ಬಂದು ಆಕೆಯ ಚಿನ್ನದ ಬಳೆಗಳನ್ನು ಕಸಿದುಕೊಂಡು ಪರಾರಿಯಾಗಲು ಮೂರನೇ ದರೋಡೆಕೋರ ಬೈಕ್ ಸ್ಟಾರ್ಟ್ ಮಾಡಿ ಸಿದ್ಧನಾಗಿದ್ದ.
ಸಹಾಯಕ್ಕಾಗಿ ವೃದ್ಧೆ ಕೂಗಿಕೊಂಡರೂ ಯಾರಿಗೂ ಕೇಳಿಸಲಿಲ್ಲ. ವೃದ್ಧೆ ಬಳಿ ಮಾತ್ರವಲ್ಲದೆ ದರೋಡೆಕೋರರು ಇನ್ನೆರಡು ಕಡೆ ದರೋಡೆಗೈದಿದ್ದಾರೆ. ಇನ್ನೊಂದೆಡೆ 27 ವರ್ಷದ ಮಹಿಳೆಯ 50,000 ಮೌಲ್ಯದ ಚಿನ್ನದ ಸರವನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಈ ಮಧ್ಯೆ, ಅದೇ ಗುಂಪು ಸೋಮವಾರ ಮನೆಗೆ ನುಗ್ಗಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರ ಮೇಲೆ ಗುಂಡು ಹಾರಿಸಿದ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಗೋವಾದ ಜುವಾರಿನಗರದಲ್ಲಿ ಈ ಘಟನೆ ನಡೆದಿದೆ.