ಭಾರತೀಯ ಸೇನೆ ನೆರವಿನಿಂದ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಗೆ ಸಾಗಿಸುವಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕರ್ನಲ್ ಎಮ್ರಾನ್ ಮುಸಾವಿ ಅವರು ಮಾಹಿತಿ ನೀಡಿ, ತಂಗ್‌ ಧರ್ ಪ್ರದೇಶದ ಜಡ್ಡಾ ಗ್ರಾಮದ ನಿವಾಸಿ ಹರ್ಮಿದಾ ಬೇಗಂ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ವೈದ್ಯಕೀಯ ಸೌಲಭ್ಯಕ್ಕಾಗಿ ಕುಪ್ವಾರ ಜಿಲ್ಲಾ ಕೇಂದ್ರಕ್ಕೆ ಸಾಗಿಸಲಾಗಿದೆ ಎಂದು ಹೇಳಿದರು.

ಸೇನೆಯು ನಿರ್ವಹಿಸುತ್ತಿರುವ ಸಾಧನಾ ಪಾಸ್‌ನಲ್ಲಿ ರೋಗಿಯನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕೆಲವೇ ನಿಮಿಷಗಳ ನಂತರ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬ್ಯುಲೆನ್ಸ್ ಪಾಸ್‌ಗೆ ಮರಳಿತು. ಸೇನೆಯ ವೈದ್ಯಕೀಯ ಸಿಬ್ಬಂದಿಯು ತಕ್ಷಣವೇ ಸ್ಪಂದಿಸಿದರು. ತುರ್ತು ಹೆರಿಗೆಗೆ ಸಹಾಯ ಮಾಡಿದರು. ತಾಯಿ ಮತ್ತು ನವಜಾತ ಶಿಶು ಸುರಕ್ಷಿತವಾಗಿದ್ದಾರೆ. ಮಹಿಳೆ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ದಾಖಲಿಸಲಾಯಿತು ಎಂದು ತಿಳಿಸಿದ್ದಾರೆ.

ನವಜಾತ ಶಿಶುವಿನ ಪೋಷಕರು ಸ್ಥಳವನ್ನು ಗುರುತಿಸಲು ಮತ್ತು ಭಾರತೀಯ ಸೇನೆಯ ಪ್ರಯತ್ನಗಳನ್ನು ಗೌರವಿಸುವ ಸಲುವಾಗಿ ಹೆಣ್ಣು ಮಗುವಿಗೆ ‘ಸಾಧನಾ’ ಎಂದು ಹೆಸರಿಸಿದ್ದಾರೆ.

ಕಳೆದ ವರ್ಷ ಸಾಧನಾ ಪಾಸ್‌ ನಲ್ಲಿ ಚಲನಚಿತ್ರ ಚಿತ್ರೀಕರಿಸಿದ ನಟಿಯ ಹೆಸರನ್ನು ಇಡಲಾಯಿತು. 2021 ರ ಆರಂಭದಲ್ಲಿ ಹರ್ಮಿದಾ ಅವರದೇ ಜಿಲ್ಲೆಯ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗುತ್ತಿದ್ದಾಗ ಸೇನಾ ಆಂಬ್ಯುಲೆನ್ಸ್‌ ನಲ್ಲಿ ಮಗುವಿಗೆ ಜನ್ಮ ನೀಡಿದ್ದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read