ಹಲ್ಲುಜ್ಜದೆ ಬೆಳಗ್ಗೆ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅನೇಕರು ಹಲ್ಲುಜ್ಜದೆ ಏನನ್ನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಅಂಥವರು ಕೂಡ ಹಲ್ಲುಜ್ಜದೆ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬಹುದು. ಹೊಟ್ಟೆ ಅಸಮಾಧಾನಗೊಂಡಿದ್ದರೆ ಪ್ರತಿದಿನ ಹಲ್ಲುಜ್ಜದೆ ನೀರನ್ನು ಕುಡಿಯಲು ಪ್ರಾರಂಭಿಸಿ.
ಹಲ್ಲುಜ್ಜದೆ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು ಈ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು. ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಕೂದಲಿಗೂ ಒಳ್ಳೆಯದು. ಕೂದಲು ಹೊಳಪು ಪಡೆದುಕೊಳ್ಳುತ್ತದೆ.
ಅಷ್ಟೇ ಅಲ್ಲ ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ತೂಕವನ್ನು ಕೂಡ ನಿಯಂತ್ರಿಸಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ತ್ವಚೆಯು ಆರೋಗ್ಯಕರವಾಗಿ ಹೊಳೆಯಲಾರಂಭಿಸುತ್ತದೆ. ಹಲ್ಲುಜ್ಜದೇ ನೀರು ಕುಡಿಯುವುದು ಚರ್ಮದ ಆರೋಗ್ಯಕ್ಕೂ ಬಹಳ ಅವಶ್ಯಕ.