ಸಾಯಿ ಪಲ್ಲವಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಜನಪ್ರಿಯ ಯುವ ನಟಿಯರಲ್ಲಿ ಒಬ್ಬರು. ಆಕೆಯ ಆನ್-ಸ್ಕ್ರೀನ್ ಉಪಸ್ಥಿತಿ, ಬಬ್ಲಿ ವ್ಯಕ್ತಿತ್ವ ಮತ್ತು ಅಸಾಧಾರಣ ನಟನಾ ಕೌಶಲ್ಯಗಳು ಅವರ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅದೆಷ್ಟೋ ಅಭಿಮಾನಿಗಳು ಆಕೆಯನ್ನ ಪ್ರೀತಿಸುತ್ತಾರೆ. ಆದರೆ ನಟಿ ಸಾಯಿ ಪಲ್ಲವಿ ಪ್ರೀತಿಸಿದ್ದು ಯಾರನ್ನ ಗೊತ್ತಾ? ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ತನ್ನ ಮೊದಲ ಪ್ರೀತಿಯ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವಿರಾಟ ಪರ್ವನ್ ಚಿತ್ರದ ಪ್ರಚಾರದ ವೇಳೆ ಸಾಯಿ ಪಲ್ಲವಿ ಒಮ್ಮೆ ತನ್ನೊಂದಿಗೆ 7ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನನ್ನು ಇಷ್ಟಪಟ್ಟಿದ್ದಾಗಿ ಬಹಿರಂಗಪಡಿಸಿದ್ದಾರೆ. ಅವನತ್ತ ಅಪಾರವಾಗಿ ಆಕರ್ಷಿತಳಾಗಿದ್ದ ನಟಿ ಆ ಹುಡುಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಗಿ ಹೇಳಿದ್ದಾರೆ. ಆದರೆ ಆ ಪ್ರೀತಿಯನ್ನು ನೇರವಾಗಿ ಹೇಳಿಕೊಳ್ಳಲು ಆಗದೇ
ನಾನು ಅವನ ಮೇಲಿನ ಪ್ರೀತಿಯನ್ನು ವಿವರಿಸಿ ಪತ್ರ ಬರೆದಿದ್ದೆ. ಆದರೆ ಅದನ್ನು ಅವನಿಗೆ ವೈಯಕ್ತಿಕವಾಗಿ ನೀಡಲು ಧೈರ್ಯ ಬರಲಿಲ್ಲ. ಹಾಗಾಗಿ ಅದನ್ನು ನೋಟ್ ಬುಕ್ ನಲ್ಲಿ ಇಟ್ಟಿದ್ದೆ ಎಂದಿದ್ದಾರೆ. ಆದಾಗ್ಯೂ, ಪತ್ರವು ಸಾಯಿ ಪಲ್ಲವಿಯವರ ತಾಯಿಯ ಕಣ್ಣಿಗೆ ಬಿದ್ದಿತ್ತು. ಅದನ್ನು ನೋಡಿದ ಅವರ ತಾಯಿ ಸಾಯಿ ಪಲ್ಲವಿಗೆ ಹೊಡೆದು ಶಿಕ್ಷಿಸಿದ್ದರಂತೆ. ನನ್ನ ತಾಯಿ ತನ್ನ ಮೇಲೆ ಕೈ ಎತ್ತಿದ್ದು ಅದೇ ಮೊದಲು ಮತ್ತು ಕೊನೆಯ ಬಾರಿ ಎಂದು ನಟಿ ಸಾಯಿ ಪಲ್ಲವಿ ಹೇಳಿದ್ದಾರೆ.