ಪ್ರಕೃತಿಯು ಹಲವು ವಿಸ್ಮಯಗಳ ಕೌತುಕವಾಗಿದೆ. ಇಂತಹ ಹಲವಾರು ವಿಸ್ಮಯಗಳನ್ನು ನೀವು ನೋಡಿರಬಹುದು. ಇದೀಗ ದಕ್ಷಿಣ ಕೆರೊಲಿನಾದಲ್ಲಿ ಪ್ರಕೃತಿ ಸೌಂದರ್ಯದ ದೃಶ್ಯ ಕಂಡುಬಂತು. ಮೌಲ್ಟ್ರಿ ಸರೋವರದಲ್ಲಿನ ಜಲಧಾರೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋವನ್ನು ಆರಂಭದಲ್ಲಿ ಫೇಸ್ಬುಕ್ನಲ್ಲಿ ಮೇಸನ್ ಫಾರ್ಮ್ಸ್ ಅವರು ಹಂಚಿಕೊಂಡಿದ್ದಾರೆ. ವಾಟರ್ಸ್ಪೌಟ್ ವಿಡಿಯೋ ಖಂಡಿತಾ ನಿಮ್ಮನ್ನು ಬೆರಗುಗೊಳಿಸುತ್ತದೆ. ಸರೋವರದಿಂದ ಆಕಾಶಕ್ಕೆ ನೆಗೆದಿರುವ ನೀರಿನ ದೃಶ್ಯಾವಳಿ ಖಂಡಿತಾ ನಿಮ್ಮ ಮನಸೂರೆಗೊಳಿಸುತ್ತದೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ವಾಟರ್ಸ್ಪೌಟ್ ಒಂದು ಆಕರ್ಷಕ ನೈಸರ್ಗಿಕ ವಿದ್ಯಮಾನವಾಗಿದ್ದು, ಅದು ನೀರಿನ ಮೇಲೆ ಸುಂಟರಗಾಳಿ ರೂಪುಗೊಂಡಾಗ ಸಂಭವಿಸುತ್ತದೆ. ಕಪ್ಪು ಮೋಡಗಳು ಮತ್ತು ಜೋರಾದ ಗಾಳಿಯು ಪ್ರದೇಶವನ್ನು ತುಂಬಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದು ಸರೋವರದ ಸಮೀಪವಿರುವವರ ಗಮನವನ್ನು ಸೆಳೆಯುತ್ತದೆ. ತೀರದಲ್ಲಿ ಜಮಾಯಿಸಿದ ಜನರು ಈ ಅಸಾಧಾರಣ ವಿದ್ಯಮಾನವನ್ನು ಕಣ್ತುಂಬಿಕೊಂಡರು.
ಅಂದಹಾಗೆ, ಹವಾಮಾನಶಾಸ್ತ್ರಜ್ಞರು ಈ ನಿರ್ದಿಷ್ಟ ಜಲಪ್ರವಾಹಕ್ಕೆ ಕಾರಣವಾದ ವಿಶಿಷ್ಟ ಪರಿಸ್ಥಿತಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅದರ ರಚನೆಯ ಹಿಂದಿನ ಡೈನಾಮಿಕ್ಸ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
https://www.youtube.com/watch?v=s26xaLG244M