HomeKarnatakaBIG NEWS: ಕಾಂಗ್ರೆಸ್ ನವರದ್ದು ಚೈನಾ ಬಜಾರ್ ಗ್ಯಾರಂಟಿ; ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

BIG NEWS: ಕಾಂಗ್ರೆಸ್ ನವರದ್ದು ಚೈನಾ ಬಜಾರ್ ಗ್ಯಾರಂಟಿ; ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಬೆಂಗಳೂರು: ಸರ್ಕಾರ ರಚನೆಗೂ ಮುನ್ನವೇ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅಪಸ್ವರ ಶುರುವಾಗಿದೆ ಎಂದು ಬಿಜೆಪಿ ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರದ್ದು ಚೈನಾ ಬಜಾರ್ ಗ್ಯಾರಂಟಿ. ಸರ್ಕಾರ ರಚನೆಗೂ ಮುನ್ನವೇ ಗ್ಯಾರಂಟಿ ಬಗ್ಗೆ ಅಪಸ್ವರ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲವೆಡೆ 200 ಮೀಟರ್ ವಿದ್ಯುತ್ ಬಿಲ್ ಕಟ್ಟಲ್ಲ ಅಂತಿದ್ದಾರೆ. ತೆರಿಗೆ ಕಟ್ಟುವವರಿಗೆ ಗ್ಯಾರಂಟಿ ಅನ್ವಯವಾಗಲ್ಲ ಎಂದು ಡಾ.ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆ ಡೆಲ್ಲಿ ಮಾಲ್ ಹಾಗೆ. ಅದು ಯಾವುದೇ ಉಪಯೋಗಕ್ಕೆ ಬರಲ್ಲ. ಕಾಂಗ್ರೆಸ್ ನದ್ದು ಸುಳ್ಳು ಭರವಸೆ ಅಂತಾ ಗೊತ್ತಾಗಿದೆ ಎಂದು ಲೇವಡಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular