Watch Video | ವೀಣೆಯಲ್ಲಿ ಸುಶ್ರಾವ್ಯವಾಗಿ ಮೂಡಿದ ಬಾಲಿವುಡ್ ಹಾಡು

ಬಾಲಿವುಡ್ ಸಿನೆಮಾಗಳಲ್ಲಿ ಭಿನ್ನ ವಿಭಿನ್ನ ಬಗೆಯ ಸಂಗೀತಗಳನ್ನ ಕೇಳಬಹುದು. ಅವುಗಳಲ್ಲಿ ಎಷ್ಟೋ ಹಾಡುಗಳು ಎವರ್ ಗ್ರೀನ್ ಆಗಿವೆ. ಇಂದಿಗೂ ಹಳೆಯ ಹಾಡುಗಳನ್ನ ಅಭಿಮಾನಿಗಳು ಗುನುಗುನಿಸ್ತಾ ಇರ್ತಾರೆ. ಇತ್ತಿಚಿನ ದಿನಗಳಲ್ಲಿ ಬಾಲಿವುಡ್ ಹಾಡುಗಳಲ್ಲಿ ಹೊಸ ಹೊಸ ಪ್ರಯೋಗ ಮಾಡುವುದನ್ನ ಗಮನಿಸಬಹುದು.

ನಟ ವರುಣ್ ಧವನ್ ಹಾಗೂ ನಟಿ ಕೃತಿ ಸನೋನ್ ನಟನೆಯ ‘ಭೇಡಿಯಾ’ ಸಿನಿಮಾದ ʼಅಪ್ನಾ ಬಲಾ ಲೇ’ ಸೂಪರ್ ಹಿಟ್ ಆಗಿರುವ ಹಾಡಾಗಿದೆ. ಬಾಲಿವುಡ್‌ನ ಸುಮಧುರ ಹಾಡು ಕೇಳಿ ಸಂಗೀತ ಪ್ರೇಮಿಗಳು ಮಂತ್ರಮುಗ್ಧರಾಗಿದ್ದರು. ಈಗ ಇದೇ ಹಾಡಿಗೆ ಶಾಸ್ತ್ರಿಯ ರೂಪ ಕೊಟ್ಟರೆ ಹೇಗಿರುತ್ತೆ ಅನ್ನೋ ಹೊಸ ಪ್ರಯೋಗವನ್ನ ಕಲಾವಿದರೊಬ್ಬರು ಮಾಡಿದ್ದಾರೆ.

ಕಿವಿ ಮತ್ತು ಮನಸ್ಸಿಗೆ ಖುಷಿ ಕೊಡುವ ವಿಡಿಯೋ ಇದಾಗಿದ್ದು, ‘ಅಪ್ನಾ ಬನಾ ಲೇ’ ಹಾಡನ್ನ ವೀಣೆಯಲ್ಲಿ ಸುಶ್ರಾವ್ಯವಾಗಿ ನುಡಿಸಲಾಗಿದೆ. ವಿನಾಕ್ಸ್ ಗಾನಾ ಅನ್ನೋ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ‘ಅಪ್ನಾ ಬಲಾ ಲೆ’ ಶೀರ್ಷಿಕೆಯೊಂದಿಗೆ ಕುಶಾಲಾ ಎಂಬ ಸಂಗೀತ ಕಲಾವಿದೆ ಈ ಬಾಲಿವುಡ್ ಹಾಡನ್ನ ವೀಣೆಯಲ್ಲಿ ನುಡಿಸಿದ್ದಾರೆ. ಸಚಿನ್-ಜಿಗರ್ ಸಂಗೀತ ಸಂಯೋಜನೆಯ ಈ ಹಾಡಿಗೆ ಅಮಿತಾಬ್ ಭಟ್ಟಾಚಾರ್ಯ ಅನ್ನುವವರು ಸಾಹಿತ್ಯದ ರೂಪವನ್ನ ಕೊಟ್ಟಿದ್ದಾರೆ.

ಮೇ 1 ರಂದು Instagramನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 35300ಕ್ಕೂ ಹೆಚ್ಚು ಬಾರಿ ಈ ವಿಡಿಯೋ ವೀಕ್ಷಿಸಲಾಗಿದೆ. ಜೊತೆಗೆ 5,700 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನ ಇಷ್ಟ ಪಟ್ಟಿದ್ದಾರೆ. ಈ ವಿಡಿಯೋ ನೋಡಿದವರೆಲ್ಲರೂ ಇದು ಸಂಗೀತದ ಹೊಸ ಪರಿಭಾಷೆ ಎಂದು ಹೊಗಳಿದ್ದಾರೆ.

https://youtu.be/0-ppXpjM8fU

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read