ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಮಹತ್ವದ ಮಾಹಿತಿ ನೀಡಿದ್ದಾರೆ.
ಯಾರಿಗೆ ಯಾವ ಶಾಸಕರ ಬೆಂಬಲ ಇದೆ ನನಗೆ ಗೊತ್ತಿಲ್ಲ. ನಾನು ಅಧ್ಯಕ್ಷನಾದ ಬಳಿಕ 135 ಶಾಸಕರು ಆಯ್ಕೆಯಾಗಿದ್ದು, ಅವರೆಲ್ಲರೂ ನನ್ನ ಜೊತೆಗಿದ್ದಾರೆ. ಇಷ್ಟು ಮಾತ್ರ ನನಗೆ ಗೊತ್ತಿದೆ ಎಂದರು.
ನನಗೆ ಯಾರ ಶಕ್ತಿಯ ಬಗ್ಗೆ ಮಾತನಾಡಲು ಗೊತ್ತಿಲ್ಲ. ಇಂದು ಹುಟ್ಟುಹಬ್ಬವಿರುವ ಕಾರಣ ಖಾಸಗಿ ಕಾರ್ಯಕ್ರಮವಿದ್ದು ನಂತರ ಗುರುಗಳನ್ನು ಭೇಟಿಯಾಗಬೇಕಿದೆ ಇದಾದ ಬಳಿಕ ನವ ದೆಹಲಿಗೆ ತೆರಳುತ್ತೇನೆ ಎಂದಿದ್ದಾರೆ.