ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, 135 ಸ್ಥಾನಗಳಲ್ಲಿ ಜಯಗಳಿಸಿದೆ.
ಕಾಂಗ್ರೆಸ್ ನಿಂದ 21 ಒಕ್ಕಲಿಗ ಶಾಸಕರು ಆಯ್ಕೆಯಾಗಿದ್ದಾರೆ. 39 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದು, ಬ್ರಾಹ್ಮಣ ಸಮುದಾಯದ ಮೂವರು, ರೆಡ್ಡಿ ಸಮುದಾಯದ ನಾಲ್ವರು, ಬಂಟರು 1, ಕೊಡವ 1, ಮುಸ್ಲಿಂ 9, ಕ್ರೈಸ್ತರು 1, ಜೈನ ಸಮುದಾಯದ ಒಬ್ಬರು ಶಾಸಕರಾಗಿದ್ದಾರೆ.
ಪರಿಶಿಷ್ಟ ಜಾತಿ ಎಡಗೈ 6, ಪರಿಶಿಷ್ಟ ಜಾತಿ ಬಲಗೈ 11, ಪರಿಶಿಷ್ಟ ಜಾತಿ ಭೋವಿ 3, ಪರಿಶಿಷ್ಟ ಜಾತಿ ಲಂಬಾಣಿ 1, ಪರಿಶಿಷ್ಟ ಜಾತಿ ಕೊರಚ 1, ಪರಿಶಿಷ್ಟ ಪಂಗಡ 15, ಕುರುಬರು 8, ಬಲಿಜ 1, ಬೆಸ್ತ 1, ಬಿಲ್ಲವ 2, ಈಡಿಗ 3, ಮರಾಠ 2, ರಜಪೂತ 1, ಉಪ್ಪಾರ ಸಮುದಾಯದ ಒಬ್ಬರು ಶಾಸಕರಾಗಿದ್ದಾರೆ.