ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋತಿದೆ. ಸ್ಪಷ್ಟ ಬಹುಮತ ಗಳಿಸಿರುವ ಕಾಂಗ್ರೆಸ್ ಅಧಿಕಾರಕ್ಕೇರಲು ಸಿದ್ದತೆ ನಡೆಸಿದ್ದು, ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಇದರ ಮಧ್ಯೆ ಬಿಜೆಪಿ ಸೋಲಿನ ಕುರಿತು ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿದ್ದು, ಈ ಪೈಕಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಕೈಗೊಂಡ ಕೆಲ ತಪ್ಪು ನಿರ್ಧಾರಗಳೂ ಸಹ ಕಾರಣ ಎಂದು ಹೇಳಲಾಗುತ್ತಿದೆ.
ಇದೀಗ ಬಿಜೆಪಿ ಸೋಲಿನ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಬಿ.ಎಲ್. ಸಂತೋಷ್, “ಕಲಿಯುತ್ತೇವೆ ಸೋಲಿನಿಂದ , ಹಿನ್ನಡೆಗಳಿಂದ, ತಪ್ಪುಗಳಿಂದ. ಉತ್ತರಿಸುತ್ತೇವೆ ಟೀಕೆಗಳಿಗೆ, ಕುಹಕಗಳಿಗೆ, ಒಡಕು ಮಾತುಗಳಿಗೆ ನಮ್ಮ ಗತಿಶೀಲತೆಯಿಂದ. ನಾವು ಇರಲಿಕ್ಕೇ ಬಂದವರು….… ಗೆಲ್ಲಲಿಕ್ಕೇ ಬಂದವರು……. ನಮಗೆ ಸೋಲು ಕ್ಷಣಿಕ…… ಮುನ್ನಡೆ ಸತತ……… ಇನ್ನು 12 ತಿಂಗಳಿನೊಳಗೆ 31000 ಕ್ಕೆ ಮತ್ತೆ 10000 ಸೇರಿಸಿ 41000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ” ಎಂದು ಹೇಳಿದ್ದಾರೆ.