ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತ ಎಂದು ಘೋಷಿಸಿತ್ತು. ಆದರೆ ಈಗ ದಕ್ಷಿಣ ಭಾರತವು ‘ಬಿಜೆಪಿ ಮುಕ್ತ’ವಾಗಿದೆ ಎಂದು ಘತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ತಿರುಗೇಟು ನೀಡಿದ್ದಾರೆ.
ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ಸೋಲುತ್ತದೆ ಎಂಬ ಅರಿವು ಹೊಂದಿದ್ದು, ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಫೋಟೋಗಳನ್ನು ಎಲ್ಲೆಡೆ ಹಾಕಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.
ಮೊದಲು ನಾವು ಹಿಮಾಚಲ ಪ್ರದೇಶ ಗೆದ್ದೆವು. ಈಗ ಕರ್ನಾಟಕವನ್ನು ಗೆದ್ದಿದ್ದೇವೆ. ಹಿಮಾಲಯದಿಂದ ಸಾಗರದವರೆಗೆ ಕಾಂಗ್ರೆಸ್ ಯಶಸ್ಸು ಸಾಧಿಸಿದೆ.‘ ಕಾಂಗ್ರೆಸ್ ಮುಕ್ತ ಭಾರತ’ ಎಂದು ಬಿಜೆಪಿ ಕರೆ ನೀಡುತ್ತಿತ್ತು ಆದರೆ ಈಗ ದಕ್ಷಿಣ ಭಾರತ ಬಿಜೆಪಿ ಮುಕ್ತವಾಗಿದೆ ಎಂದು ಸಿಎಂ ಬಘೇಲ್ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.