ಬೆಂಗಳೂರು: ರೈತರ ಕೃಷಿ ಪಂಪ್ಸೆಟ್ ಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದ್ದು, ಆರು ತಿಂಗಳ ಗಡುವು ವಿಧಿಸಲಾಗಿದೆ. ಆಧಾರ್ ಜೋಡಣೆ ಮಾಡದಿದ್ದರೆ ಸಬ್ಸಿಡಿ ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ.
ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ಆದೇಶಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನೀರಾವರಿ ಕೃಷಿ ಪಂಪ್ಸೆಟ್ ಗಳ ಆರ್.ಆರ್. ಸಂಖ್ಯೆಗಳನ್ನು ಸಂಬಂಧಿತ ಗ್ರಾಹಕರ ಆಧಾರ್ ನಂಬರ್ ಜೊತೆಗೆ ಆರು ತಿಂಗಳ ಒಳಗೆ ಜೋಡಣೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಅಂತಹ ಆರ್.ಆರ್. ಸಂಖ್ಯೆಗಳಿಗೆ ಸಹಾಯಧನ ಬಿಡುಗಡೆ ಮಾಡುವುದಿಲ್ಲವೆಂದು ಕೆಇಆರ್‌ಸಿ ಆದೇಶ ಹೊರಡಿಸಿದ್ದು, ರೈತ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕಡ್ಡಾಯವಾಗಿ ಕೃಷಿ ಪಂಪ್ಸೆಟ್ ಗಳ ಗ್ರಾಹಕರಾಗಿರುವ ರೈತದ ಆಧಾರ್ ಸಂಖ್ಯೆಯನ್ನು ಸಂಬಂಧಿಸಿದ ಕೃಷಿ ಪಂಪ್ ಸೆಟ್ ನ ಆರ್.ಆರ್. ಸಂಖ್ಯೆಗೆ ಜೋಡಣೆ ಮಾಡಬೇಕೆಂದು ಹೇಳಲಾಗಿದೆ.