BIG NEWS: ಗಗನಕ್ಕೇರಿದೆ ಶುಂಠಿ ಬೆಲೆ, ಮುಂದಿನ ದಿನಗಳಲ್ಲಿ ಆಗಲಿದೆ ಮತ್ತಷ್ಟು ದುಬಾರಿ….!

ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಶುಂಠಿ ಬಳಸ್ತಾರೆ. ಶುಂಠಿ ಬಳಕೆ ಶತಶತಮಾನಗಳಿಂದಲೂ ರೂಢಿಯಲ್ಲಿದೆ. ಕೇವಲ ಮಸಾಲೆಯಾಗಿ ಮಾತ್ರವಲ್ಲದೆ ಇದನ್ನು ಔಷಧ ರೂಪದಲ್ಲಿಯೂ ಸೇವನೆ ಮಾಡಲಾಗುತ್ತದೆ.

ಇದರಲ್ಲಿರುವ ಗುಣಲಕ್ಷಣಗಳು ನಮ್ಮ ದೇಹಕ್ಕೆ ವೈರಸ್‌ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಾಕಷ್ಟು ಸಹಾಯ ಮಾಡುತ್ತವೆ. ಆದರೆ ಇನ್ಮೇಲೆ ಶುಂಠಿ ಖರೀದಿಸುವುದು ಅಷ್ಟು ಸುಲಭವಿಲ್ಲ. ಯಾಕಂದ್ರೆ ಶುಂಠಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಮಣಿಪುರದಲ್ಲಿ ಹಿಂಸಾಚಾರದ ನಂತರ ಶುಂಠಿಯ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.

ಭಾರತದ ಹಲವು ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಶುಂಠಿ ಬೆಳೆಗೂ ಹಾನಿಯಾಗಿದ್ದು, ಬೆಲೆ ದಿಢೀರನೆ ಏರಿದೆ. ಇದರಿಂದ ರೈತರೂ ನಷ್ಟ ಅನುಭವಿಸುತ್ತಿದ್ದಾರೆ. ಬಂಗಾಳದಲ್ಲಿ ಶುಂಠಿಯ ಬೆಲೆ ಏರಿಕೆಗೆ ಕಾರಣ ಮಣಿಪುರದಲ್ಲಿ ನಡೆದ ಹಿಂಸಾಚಾರ. ಮಣಿಪುರದ ಹಿಂಸಾಚಾರದ ನಂತರ ಶುಂಠಿಯನ್ನು ಬಂಗಾಳಕ್ಕೆ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶುಂಠಿಯ ಬೆಲೆ ಕ್ವಿಂಟಲ್‌ಗೆ 6 ರಿಂದ 7 ಸಾವಿರ ರೂಪಾಯಿಗೆ ಏರಿದೆ.

ಉಳಿದೆಡೆ ಕೂಡ ಶುಂಠಿ ಬೆಲೆ ಕೆಜಿಗೆ 300 ರೂಪಾಯಿ ಆಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ಶುಂಠಿ ದಕ್ಷಿಣ ಭಾರತದಿಂದ ಸರಬರಾಜಾಗುತ್ತಿತ್ತು.  ಆದರೆ ಕರ್ನಾಟಕದ ಚುನಾವಣೆ ಮತ್ತು ಮಣಿಪುರ ಹಿಂಸಾಚಾರದಿಂದ ಸಾರಿಗೆ ವಾಹನಗಳು ಲಭ್ಯವಿಲ್ಲ. ರೈತರು ತಾವು ಬೆಳೆದ ಶುಂಠಿಯನ್ನು ರಾಜ್ಯದಿಂದ ಹೊರಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಶುಂಠಿಯ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬುದು ತಜ್ಞರ ಆತಂಕ. ಚಳಿಗಾಲ ಮತ್ತು ಮಳೆಗಾಲದಲ್ಲಿ ಅಡುಗೆ ಜೊತೆಗೆ ಕಷಾಯ ಮತ್ತು ಚಹಾಕ್ಕೆ ಶುಂಠಿ ಬೇಕೇ ಬೇಕು. ಬೇಸಿಗೆಯಲ್ಲಿ ಶುಂಠಿಯ ಸೇವನೆ ಕಡಿಮೆ. ಹಾಗಾಗಿ ಗೃಹಿಣಿಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read