ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಕೊಂಚ ಇಳಿಮುಖವಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿಯೂ ಅಗ್ಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದೌರ್ಬಲ್ಯದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. ಗುರುವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 61,000 ದಾಟಿದೆ. ಬೆಳ್ಳಿಯ ಬೆಲೆ 76,000 ರೂಪಾಯಿಯ ಆಸುಪಾಸಿನಲ್ಲಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,370 ರೂಪಾಯಿಗಳಿಗೆ ಇಳಿದಿದೆ. ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 61,700 ರೂಪಾಯಿ ಇತ್ತು. ಬೆಳ್ಳಿಯ ಬೆಲೆಯೂ ಪ್ರತಿ ಕೆಜಿಗೆ 1,650 ರೂಪಾಯಿ ಇಳಿಕೆಯಾಗಿ 75,950 ರೂಪಾಯಿಗಳಿಗೆ ತಲುಪಿದೆ.
ತಜ್ಞರ ಅಭಿಪ್ರಾಯವೇನು?
ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 2,026 ಡಾಲರ್‌ಗೆ ಕುಸಿದಿದ್ದು, ಬೆಳ್ಳಿ ಪ್ರತಿ ಔನ್ಸ್‌ಗೆ 25.10 ಡಾಲರ್‌ನಷ್ಟೂ ಇಳಿಕೆ ದಾಖಲಿಸಿದೆ. ಅಮೆರಿಕದ ಹಣದುಬ್ಬರ ಅಂಕಿ-ಅಂಶಗಳ ಆಗಮನದ ನಂತರ, ಚಿನ್ನದಲ್ಲಿ ಚಂಚಲತೆ ಕಂಡುಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದಾಗಿ ಏಷ್ಯಾದ ಮಾರುಕಟ್ಟೆಯಲ್ಲಿ ಬಂಗಾರ ಕೊಂಚ ಅಗ್ಗವಾಗಿದೆ.
ದೀರ್ಘಕಾಲ ಚಿನ್ನದ ಬೆಲೆಯಲ್ಲಿ ಏರಿಳಿತ
ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಫೆಬ್ರವರಿಯಲ್ಲಿ ಚಿನ್ನದ ದರ 10 ಗ್ರಾಂಗೆ 55,000 ರೂಪಾಯಿ ಇತ್ತು. ಈ ಬಾರಿ ದೀಪಾವಳಿ ವೇಳೆಗೆ ಬಂಗಾರದ ದರ 10 ಗ್ರಾಂಗೆ 65,000 ರೂಪಾಯಿಗೆ ಏರಬಹುದು. ಬೆಳ್ಳಿಯ ಬೆಲೆ ಕೆಜಿಗೆ 80,000 ರೂ.ಗೆ ಏರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.