ʼದಿ ಕೇರಳ ಸ್ಟೋರಿʼ ಚಿತ್ರತಂಡ ಭೇಟಿ ಮಾಡಿದ ಸಿಎಂ ಯೋಗಿ ಆದಿತ್ಯನಾಥ್

ವಿವಾದಾತ್ಮಕ ಚಿತ್ರ ʼದಿ ಕೇರಳ ಸ್ಟೋರಿʼ ಚಿತ್ರ ತಂಡದ ಸದಸ್ಯರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖ್ನೋದಲ್ಲಿ ಭೇಟಿಯಾಗಿ ಸಭೆ ನಡೆಸಿದ್ದಾರೆ.‌

ನಾಯಕಿ ನಟಿ ಅದಾ ಶರ್ಮಾ, ನಿರ್ದೇಶಕ ಸುದೀಪ್ತೋ ಸೇನ್, ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಅದಾ ಶರ್ಮಾ ಜೊತೆಗೆ ಚಿತ್ರ ನಿರ್ಮಾಪಕರು ಮುಖ್ಯಮಂತ್ರಿಯೊಂದಿಗೆ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಚಿತ್ರ ನೋಡುವಂತೆ ಕೇಳಿಕೊಂಡರು. ಮೇ 12 ರಂದು ಲೋಕಭವನದಲ್ಲಿ ಕ್ಯಾಬಿನೆಟ್‌ನೊಂದಿಗೆ ವಿಶೇಷ ಪ್ರದರ್ಶನದಲ್ಲಿ ಸಿಎಂ ಚಲನಚಿತ್ರವನ್ನು ವೀಕ್ಷಿಸುವ ನಿರೀಕ್ಷೆಯಿದೆ.

ನಿರ್ಮಾಪಕ ವಿಪುಲ್ ಅಮೃತಲಾಲ್ ಮಾತನಾಡಿ, “ಉತ್ತರ ಪ್ರದೇಶ ಸರ್ಕಾರ ಮತ್ತು ಯೋಗಿ ಜಿ ಕ್ರಮ ನಮ್ಮ ನೈತಿಕತೆಯನ್ನು ಸಾಕಷ್ಟು ಹೆಚ್ಚಿಸಿದೆ. ನಮ್ಮ ಚಿಂತನೆಯನ್ನು ಬಲಪಡಿಸಿದ್ದಾರೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ ಎಂಬ ಕಾರಣದಿಂದಾಗಿ ಅವರು ಜನರಿಗೆ ಬಹಳ ಶಕ್ತಿಯುತ ಸಂದೇಶವನ್ನು ಕಳುಹಿಸಿದ್ದಾರೆ. ಇದು ಸಂಭವವಾಗುವಂತೆ ಮಾಡಿದ ಸಿಎಂಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ”. ಎಂದರು.

ನಿರ್ದೇಶಕ ಸುದೀಪ್ತೋ ಸೇನ್ “ಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಲು ಮತ್ತು ಉತ್ತರ ಪ್ರದೇಶದ ನಾಗರಿಕರಿಗೆ ಈ ಚಲನಚಿತ್ರವನ್ನು ವೀಕ್ಷಿಸಲು ಅವಕಾಶ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಲು ನಾವು ಬಂದಿದ್ದೇವೆ” ಎಂದು ಹೇಳಿದರು.

ಮೇ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ʼದಿ ಕೇರಳ ಸ್ಟೋರಿʼ ಸಿನಿಮಾವನ್ನ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಮಂಗಳವಾರವಷ್ಟೇ ಉತ್ತರಪ್ರದೇಶದಲ್ಲಿ ʼದಿ ಕೇರಳ ಸ್ಟೋರಿʼ ಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಲಾಯಿತು.

ಕೇರಳ ಸ್ಟೋರಿಯಲ್ಲಿ ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೇರಳ ಸ್ಟೋರಿ ಬಿಡುಗಡೆಯಾದ ಐದನೇ ದಿನಕ್ಕೆ 50 ಕೋಟಿ ರೂ. ಗಳಿಕೆಯ ಗಡಿ ದಾಟಿದ್ದು, ಮಂಗಳವಾರ ಬಾಕ್ಸ್ ಆಫೀಸ್‌ನಲ್ಲಿ 11.14 ಕೋಟಿ ರೂ. ಗಳಿಸಿದೆ. ಇದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಇದುವರೆಗೆ 56.86 ಕೋಟಿ ರೂ.ಗಳಿಸಿದೆ ಮತ್ತು ಮೇ 12 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

CM Yogi Adityanath meets with The Kerala Story team in Lucknow | Bollywood - Hindustan Times

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read