ಶಿಕ್ಷಣ ಯಾರ ಸ್ವತ್ತೂ ಅಲ್ಲ. ಬಡವರ ಮಕ್ಕಳಾದರೇನು ಬುದ್ಧಿವಂತರಿರೋದಿಲ್ವಾ? ಈ ಮಾತು ಯಾಕೆ ಹೇಳ್ತಾ ಇದ್ದೀವಿ ಅಂದ್ರೆ, ತಮಿಳುನಾಡಿನ 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಹೌದು, ದಿನಗೂಲಿ ಕಾರ್ಮಿಕನ ಮಗಳಾಗಿರುವ ಅಣ್ಣಾಮಲೈಯರ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ನಂದಿನಿ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆದು ಪೂರ್ಣ ಅಂಕ ಗಳಿಸಿದ್ದಾಳೆ. ಸೋಮವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ನಂದಿನಿ ಎಲ್ಲಾ ವಿಷಯಗಳಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿದ್ದಾಳೆ. ಈಕೆಯ ಸಾಧನೆ ಬಗ್ಗೆ ಶಿಕ್ಷಕರು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಶಾಲೆ, ಶಿಕ್ಷಕರು ಮತ್ತು ನನ್ನ ಪೋಷಕರು ಮತ್ತು ಸಂಬಂಧಿಕರ ಪ್ರೋತ್ಸಾಹದಿಂದಲೇ ಇದು ಸಾಧ್ಯವಾಯಿತು. ನನ್ನ ಶಿಕ್ಷಕರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಪೋಷಕರ ಬೆಂಬಲ ಮತ್ತು ನನಗೆ ಓದಲು ಸಮಯ ನೀಡಿರುವುದು ನನ್ನ ಗೆಲುವಿಗೆ ಕಾರಣವಾಗಿದೆ ಎಂದು ವಿದ್ಯಾರ್ಥಿನಿ ನಂದಿನಿ ತಿಳಿಸಿದ್ದಾಳೆ.