Caught on Cam | ಪೊಲೀಸ್ ಪೇದೆಯನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ವಿದ್ಯಾರ್ಥಿ ಅಂದರ್

ಜೋಧ್‌ಪುರ: ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ ಟ್ರಾಫಿಕ್ ಪೊಲೀಸ್ ಸೂಚನೆಗೆ ಕಿಮ್ಮತ್ತು ನೀಡದ ಚಾಲಕ ಪೊಲೀಸ್ ಪೇದೆಯನ್ನೇ 500 ಮೀ. ಗೂ ಹೆಚ್ಚು ಕಾರಿನ ಬ್ಯಾನೆಟ್ ನಲ್ಲಿ ಎಳೆದೊಯ್ದ ಪ್ರಕರಣ ನಡೆದಿದೆ.

ಆರೋಪಿ ಚಾಲಕ ವಾಹನ ಚಲಾಯಿಸುತ್ತಾ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿದ್ದಾರೆ. ಆದರೆ, ವಾಹನವನ್ನು ನಿಲ್ಲಿಸದೆ ಕಾರಿನ ಬ್ಯಾನೆಟ್‌ನಲ್ಲಿ ಪೊಲೀಸ್ ಪೇದೆಯನ್ನೇ ಎಳೆದೊಯ್ದಿದ್ದಾನೆ.

ಆರೋಪಿ ಚಾಲಕನನ್ನು ಓಮರಾಮ್ ದೇವಸಿ ಎಂದು ಗುರುತಿಸಲಾಗಿದ್ದು, ಈತ ವಿದ್ಯಾರ್ಥಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಈ ಕೃತ್ಯ ಸೆರೆಯಾಗಿದೆ. ಜೋಧ್‌ಪುರದ ಮೆಡಿಕಲ್ ಇಂಟರ್‌ಸೆಕ್ಷನ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಕಾರು ಚಾಲಕ ಓಮರಾಮ್ ದೇವಸಿಯನ್ನು ವಶಕ್ಕೆ ಪಡೆದ ಶಾಸ್ತ್ರಿನಗರ ಠಾಣೆಯ ಪೊಲೀಸರು ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಗೋವಿಂದ್ ವ್ಯಾಸ್ ಅವರ ಕೈಗಳಿಗೆ ಗಾಯಗಳಾಗಿದ್ದು, ಅವರ ಮೊಬೈಲ್ ಫೋನ್‌ಗೆ ಹಾನಿಯಾಗಿದೆ.

Man Drags Traffic Cop on His Car's Bonnet For Over Half a Kilometre | WATCH

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read