HomeKarnatakaBIG NEWS: ವಿಧಾನಸಭಾ ಚುನಾವಣೆ; ಚುನಾವಣಾ ಆಯೋಗದಿಂದ ವಿವಿಧ ಬಗೆಯ ಥೀಮ್ ಮತಗಟ್ಟೆಗಳ ಸ್ಥಾಪನೆ

BIG NEWS: ವಿಧಾನಸಭಾ ಚುನಾವಣೆ; ಚುನಾವಣಾ ಆಯೋಗದಿಂದ ವಿವಿಧ ಬಗೆಯ ಥೀಮ್ ಮತಗಟ್ಟೆಗಳ ಸ್ಥಾಪನೆ

ರಾಜ್ಯ ವಿಧಾನಸಭಾ ಚುನಾವಣೆಗೆ ಅಧಿಕೃತ ಪ್ರಕ್ರಿಯೆ ಆರಂಭಿಸಿದ ಕೇಂದ್ರ ಚುನಾವಣಾ ಆಯೋಗ | Karnataka News in Kannada

ಬೆಂಗಳೂರು: ನಾಳೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಮತದಾರರು ಉತ್ಸಾಹದಲ್ಲಿ ಬಂದು ತಮ್ಮ ಹಕ್ಕು ಚಲಾವಣೆ ಮಾಡುವ ಉದ್ದೇಶಕ್ಕೆ ಚುನಾವಣಾ ಆಯೋಗ ಬೆಂಗಳೂರಿನಲ್ಲಿ ವಿವಿಧ ರೀತಿಯ ಥೀಮ್ ಮತಗಟ್ಟೆಗಳನ್ನು ಸ್ಥಾಪಿಸಿದೆ.

ಬೆಂಗಳೂರುನ 28 ಕ್ಷೇತ್ರ ವ್ಯಾಪ್ತಿಗಳಲ್ಲಿ 264 ಥೀಮ್ ಆಧಾರಿತ ಮತಗಟ್ಟೆ ಬೂತ್ ಗಳನ್ನು ನಿರ್ಮಿಸಿದೆ. ಪಿಂಕ್ ಮತಗಟ್ಟೆಗಳು, ಯುವ ಮತಗಟ್ಟೆಗಳು, ಸಾಂಸ್ಕೃತಿಕ ಮತಗಟ್ಟೆ ಸೇರಿದಂತೆ ವಿಭಿನ್ನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳಾ ಮತದಾರರನ್ನು ಪ್ರೋತ್ಸಾಹಿಸಲು ಸಖಿ ಪಿಂಕ್ ಮತಗಟ್ಟೆ, ಯುವ ಮತದಾರರನ್ನು ಪ್ರೋತ್ಸಾಹಿಸಲು ಯುವ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕರ ಮತಗಟ್ಟೆ, ತೃತಿಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular