ಚಾರ್ಜರ್ ಸೇರಿದಂತೆ ಜಾರ್ಜಿಂಗ್ ಅಕ್ಸೆಸರೀಸ್ ಬೆಲೆಯನ್ನು ಗ್ರಾಹಕರಿಗೆ ಮರುಪಾವತಿಸಲು ಒಪ್ಪಿಕೊಂಡ ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಿಗೆ ಸುಮಾರು 500 ಕೋಟಿ ರೂಪಾಯಿಗಳನ್ನು ಸಬ್ಸಿಡಿಯಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವರದಿಯ ಪ್ರಕಾರ ಓಲಾ ಭಾರೀ ಕೈಗಾರಿಕೆಗಳ ಸಚಿವಾಲಯದಿಂದ ಹೆಚ್ಚಿನ ಮರುಪಾವತಿಯನ್ನು ಪಡೆಯುವ ಸಾಧ್ಯತೆಯಿದೆ. ಓಲಾಗೆ ಸುಮಾರು 370 ಕೋಟಿ ರೂ. ಸಬ್ಸಿಡಿ ಸಿಕ್ಕರೆ, ಅಥರ್ ಎನರ್ಜಿಗೆ 275 ಕೋಟಿ ರೂ., ಟಿವಿಎಸ್ 150 ಕೋಟಿ ರೂ. ಮತ್ತು ಹೀರೋ ಮೋಟೋಕಾರ್ಪ್ 28 ಕೋಟಿ ರೂಪಾಯಿಯಿಂದ 30 ಕೋಟಿ ಪಡೆಯುವ ಸಾಧ್ಯತೆ ಇದೆ.
ಕಂಪನಿಗಳು ಮಾಡಿದ ಮರುಪಾವತಿಯ ವಿವರಗಳನ್ನು ಸಲ್ಲಿಸಿದ ನಂತರ ಉಳಿದ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಓಲಾ ಮತ್ತು ಅಥೆರ್ ಸಾರ್ವಜನಿಕ ಹೇಳಿಕೆಗಳಲ್ಲಿ ನಿರ್ದೇಶನವನ್ನು ಅನುಸರಿಸುವುದಾಗಿ ಹೇಳಿದೆ. ಓಲಾ ಸುಮಾರು 130 ಕೋಟಿ ರೂ.ಗಳನ್ನು ಗ್ರಾಹಕರಿಗೆ ಮರುಪಾವತಿಸಿದರೆ, ಅಥರ್ 140 ಕೋಟಿ ರೂ.ಮರುಪಾವತಿಸಲಿದೆ.
EV ದ್ವಿಚಕ್ರ ವಾಹನ ತಯಾರಕರು ತಮ್ಮ ಗ್ರಾಹಕರಿಗೆ ವಾಹನ ಮತ್ತು ಚಾರ್ಜರ್‌ಗಳಿಗೆ ಪ್ರತ್ಯೇಕವಾಗಿ ಬಿಲ್ ಮಾಡುತ್ತಿದ್ದವು.