ತೆಳ್ಳಗಾಗಲು ಇದೆಂಥಾ ವ್ಯಾಯಾಮ ? ವಿಡಿಯೋ ನೋಡಿದ ನೆಟ್ಟಿಗರಿಗೆ ಅಚ್ಚರಿ 09-05-2023 6:48AM IST / No Comments / Posted In: Mental Health, Latest News, Health, Live News, Life Style ಉತ್ತಮ ಆರೋಗ್ಯಕ್ಕಾಗಿ ಮತ್ತು ರೋಗಗಳಿಂದ ದೂರವಿರಲು ಫಿಟ್ನೆಸ್ ಮುಖ್ಯವಾಗಿದೆ. ಫಿಟ್ ಆಗಿರಲು ಜನರು ಡಾನ್ಸ್, ಯೋಗ ಮತ್ತು ವ್ಯಾಯಾಮ ಮುಂತಾದವುಗಳನ್ನು ಮಾಡುತ್ತಾರೆ. ಅಂಥದ್ದೇ ವಿಡಿಯೋ ಇದೀಗ ವೈರಲ್ ಆಗಿದೆ. ಇದೀಗ ದಿ ಪರ್ಫೆಕ್ಟ್ ಹೆಲ್ತ್ ಆಯೋಜಿಸಿದ ಗುಂಪೊಂದು ಮಾಡಿರುವ ಆಕ್ಯುಪ್ರೆಶರ್ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಜನರು, ಸ್ನಾಯು ರೋಲರ್‌ಗಳಿಂದ ತಮ್ಮ ನೆತ್ತಿ ಮತ್ತು ಕಾಲುಗಳನ್ನು ಡ್ಯಾನ್ಸ್ ಮಾಡುತ್ತಾ ಮಸಾಜ್ ಮಾಡಿದ್ದಾರೆ. ಅಲ್ಲದೆ ಈ ಗುಂಪು ತಮ್ಮ ಹೊಟ್ಟೆಯ ಮೇಲೆ ಸ್ನಾಯು ರೋಲರ್ ಉರುಳಿಸುತ್ತಾ ನೃತ್ಯದ ಚಲನೆ ಮಾಡಿದ್ದಾರೆ. ಈ ವಿಡಿಯೋವನ್ನು ಮೊದಲು ದಿ ಪರ್ಫೆಕ್ಟ್ ಹೆಲ್ತ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ‘ಬೆಲನ್ ಥೆರಪಿ’ ಎಂದು ವಿವರಿಸಲಾಗಿದೆ. ಪರ್ಫೆಕ್ಟ್ ಹೆಲ್ತ್ ಎಂಬ ಇನ್ಸ್ಟಾಗ್ರಾಂ ಪುಟ 1.6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದೆ. ಯೂಟ್ಯೂಬ್ ನಲ್ಲಿ 1.8 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ದಿ ಪರ್ಫೆಕ್ಟ್ ಹೆಲ್ತ್‌ನ ಯೂಟ್ಯೂಬ್ ಚಾನೆಲ್‌ನ ವಿಡಿಯೋದಲ್ಲಿ, ಆಲ್ಝೈಮರ್ ಕಾಯಿಲೆ, ಬುದ್ಧಿಮಾಂದ್ಯತೆ, ಶ್ವಾಸಕೋಶದ ಸಮಸ್ಯೆಗಳು ಮತ್ತು ಸಮತೋಲನದ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಆಕ್ಯುಪ್ರೆಶರ್ ಗುಣಪಡಿಸುತ್ತದೆ ಎಂದು ಡಾ ಮನಿಶಾ ಹೇಳಿಕೊಂಡಿದ್ದಾರೆ. ಈ ವಿಡಿಯೋದ ಕುರಿತು ಪ್ರತಿಕ್ರಿಯಿಸಿದ ಟ್ವಿಟ್ಟರ್ ಬಳಕೆದಾರರು, ಭಾರತೀಯ ಮೇಲ್ವರ್ಗದ ಆಂಟಿ ಮತ್ತು ಅಂಕಲ್ ಗಳು ಬಹಳಷ್ಟು ಹಣವನ್ನು ಮತ್ತು ಸಮಯವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. Main bol raha hu bohot scope hai iss desh mein. pic.twitter.com/YAEZhltCzM — Chirag Barjatya (@chiragbarjatyaa) May 4, 2023 Main bol raha hu bohot scope hai iss desh mein. pic.twitter.com/YAEZhltCzM — Chirag Barjatya (@chiragbarjatyaa) May 4, 2023 Main bol raha hu bohot scope hai iss desh mein. pic.twitter.com/YAEZhltCzM — Chirag Barjatya (@chiragbarjatyaa) May 4, 2023 Main bol raha hu bohot scope hai iss desh mein. pic.twitter.com/YAEZhltCzM — Chirag Barjatya (@chiragbarjatyaa) May 4, 2023 Main bol raha hu bohot scope hai iss desh mein. pic.twitter.com/YAEZhltCzM — Chirag Barjatya (@chiragbarjatyaa) May 4, 2023 Main bol raha hu bohot scope hai iss desh mein. pic.twitter.com/YAEZhltCzM — Chirag Barjatya (@chiragbarjatyaa) May 4, 2023