ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನವರು ತಪ್ಪು ಮಾಡಿದರೆ ನಾವೇನು ಮಾಡಲು ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಐಟಿ ದಾಳಿ ಆಗುತ್ತೆ ಎಂದು ಕಾಂಗ್ರೆಸ್ ನವರು ಮೊದಲೇ ಹೇಳ್ತಾರೆ. ಇದು ಕಾಂಗ್ರೆಸ್ ನವರ ತಂತ್ರಗಾರಿಕೆ. ಮೊದಲು ತಪ್ಪು ಮಾಡೋದನ್ನು ಕಾಂಗ್ರೆಸ್ ಬಿಡಲಿ ಎಂದು ಹೇಳಿದರು.
ನಮ್ಮ ರಾಷ್ಟ್ರೀಯ ನಾಯಕರು ಚುನಾವಣೆಗಾಗಿ ರಾಜ್ಯಕ್ಕೆ ಬಂದಿದ್ದಾರೆ. ಇದರಿಂದ ಬಿಜೆಪಿ ಪಕ್ಷಕ್ಕೆ ದೊಡ್ಡ ಬೂಸ್ಟರ್ ಡೋಸ್ ಆಗುತ್ತೆ ಎಂದು ಹೇಳಿದರು.