
ಮೈಸೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಕಂಟಕವಾಗಲಿದೆ. ಹಿಂದೂಗಳ ಮೀಸಲಾತಿ ತೆಗೆದು ಮುಸ್ಲಿಂರಿಗೆ ಕೊಡುತ್ತಾರೆ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಪ್ರತಾಪ್ ಸಿಂಹ, ಹನುಮನ ಜನ್ಮ ದಿನ ಕೇಳುವ ಸಿದ್ದರಾಮಯ್ಯ ಹೈದರಾಲಿಗೆ ಮಗ ಹುಟ್ಟಿದಾಗ ಆತನ ಪಕ್ಕ ಕುಳಿತಿದ್ರಾ? ಎಂದು ಪ್ರಶ್ನಿಸಿದ್ದಾರೆ. ಹನುಮಜಯಂತಿ ದಿನ ಇಂದು ಹನುಮ ಜಯಂತಿ ಮಾಂಸಾಹಾರ ತಿನ್ನಬಾರದು ಎಂದು ಹೇಳಿದ್ದಕ್ಕೆ ಹನುಮ ತಾನು ಹುಟ್ಟಿದ್ದು ಇಂದು ಎಂದು ಹೇಳಿದ್ದನಾ? ಎಂದು ಸಿದ್ದರಾಮಯ್ಯ ಕೇಳಿದ್ದರು. ಹನುಮನ ಜನ್ಮ ದಿನ ಯಾವಾಗ ಎಂದೇ ತಿಳಿಯದ ಸಿದ್ದರಾಮಯ್ಯನವರಿಗೆ ಟಿಪ್ಪು ಜನ್ಮದಿನ ಮಾತ್ರ ನೆನಪಾಗುತ್ತದೆ. ಟಿಪ್ಪು ತಂದೆ ಹೈದರಾಲಿ ಪಕ್ಕ ಕುಳಿತು ಸಿದ್ದರಾಮಯ್ಯ ಕುಂಡಲಿ ಬರೆಸುತ್ತಿದ್ರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

