Viral Video | ಕೊಹ್ಲಿ ಅಭಿಮಾನಿಗಳನ್ನ ಕೆಂಗಣ್ಣಿನಿಂದ ಗುರಾಯಿಸಿದ ಗಂಭೀರ್

ಐಪಿಎಲ್ ಪ್ರಿಮಿಯರ್ ಲೀಗ್-2023 ರಲ್ಲಿ ಹೈವೊಲ್ವೇಜ್ ಪಂದ್ಯಗಳಿಗಿಂತ ಹೆಚ್ಚಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಲಕನೋ ಸೂಪರ್ ಜೈಂಟ್ ಮೆಂಟರ್ ಗೌತಮ್ ಗಂಭೀರ್ ನಡುವಿನ ಜಿದ್ದಾಜಿದ್ದೇ ಹೆಚ್ಚು ಹೈಲೆಟ್ ಆಗಿತ್ತು. ಮೈದಾನದಲ್ಲೇ ನಡೆದ ಇವರಿಬ್ಬರ ವಾಕ್ಸಮರ ನೋಡಿ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿಬಿಟ್ಟಿದ್ದರು.

ಅದರಲ್ಲೂ ವಿರಾಟ್ ಅಭಿಮಾನಿಗಳಿಗೆ ಗೌತಮ್ ನಡೆದುಕೊಂಡಿರೋ ರೀತಿ ನೋಡಿ ರೊಚ್ಚಿಗೆದ್ದಿದ್ದಾರೆ.ಈಗ ಇದೇ ಅಭಿಮಾನಿಗಳು ಗೌತಮ್ ಗಂಭೀರ್ ಅವರನ್ನ ಎಲ್ಲಾದರೂ ಕಂಡರೆ ಸಾಕು ವಿರಾಟ್ ಹೆಸರು ಹೇಳಿ ಹೇಳಿ ಉರಿಸುತ್ತಿದ್ದಾರೆ. ಇತ್ತೀಚೆಗೆ ಇಂತಹದ್ದೇ ವಿಡಿಯೋ ಒಂದು ವೈರಲ್ ಆಗಿದೆ. ಇಲ್ಲಿ ಗೌತಮ್ ಗಂಭೀರ್ ವಿರಾಟ್ ಅಭಿಮಾನಿಗಳನ್ನ ಕೆಂಗಣ್ಣಿನಿಂದ ಗುರಾಯಿಸುವುದನ್ನ ಗಮನಿಸಬಹುದು.

ಗೌತಮ್ ಗಂಭೀರ್ ಕ್ರೀಡಾಂಗಣದ ಮೆಟ್ಟಿಲುಗಳನ್ನ ಏರುತ್ತಿದ್ದಾಗ, ಅಲ್ಲೇ ಇದ್ದ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಎಂದು ಘೋಷಣೆಯನ್ನ ಕೂಗಿದ್ದಾರೆ. ಇದು ಆತನನ್ನ ಕೆಣಕೊದಕ್ಕಂತಾನೇ ಕೂಗಿದ್ದಾಗಿತ್ತು. ಕೊಹ್ಲಿ ಹೆಸರು ಕಿವಿಗೆ ಬಿದ್ದಿದ್ದೇ ತಡ, ಗೌತಮ್ ಅಲ್ಲೇ ನಿಂತು ಬಗ್ಗಿ, ಹಾಗೆ ಕೂಗುತ್ತಿದ್ದವರನ್ನು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ್ದಾರೆ. ನಂತರ ಹಾಗೆಯೇ ಮುಂದೆ ಹೋಗಿದ್ದಾನೆ.

ಈ ವಿಡಿಯೋ ವೈರಲ್ ಆಗಿದ್ದು, ಗೌತಮ್ ರಿಯಾಕ್ಷನ್ ನೋಡಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಅಂದಹಾಗೆ ಈ ಘಟನೆಗೆ ಕಾರಣವಾಗಿದ್ದು ಬೆಂಗಳೂರಿನಲ್ಲಿ ನಡೆದ ಆರ್‌ ಸಿ ಬಿ ಹಾಗೂ ಎಲ್‌ ಎಸ್‌ ಜಿ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಗಂಭೀರ್ ಅವರ ವರ್ತನೆ.

ಈ ಹಿಂದೆ ಲಕ್ನೋ ಸೂಪರ್ ಜೈಂಟ್ ತಂಡ ಆರ್‌ ಸಿ ಬಿ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಿದ್ದಾಗ ಕೊನೆಯ ಎಸೆತದಲ್ಲಿ ಆರ್‌ ಸಿ ಬಿ ತಂಡವನ್ನು ಎಲ್‌ಎಸ್‌ಜಿ ಮಣಿಸಿತ್ತು. ಆ ಪಂದ್ಯದ ಬಳಿಕ ಎಲ್‌ಎಸ್‌ಜಿ ಮೆಂಟರ್ ಗೌತಮ್ ಗಂಭೀರ್ ಆರ್‌ಸಿಬಿ ಅಭಿಮಾನಿಗಳನ್ನು ಗುರಿಯಾಗಿಟ್ಟುಕೊಂಡು ಸುಮ್ಮನಿರುವಂತೆ ಸನ್ನೆಯ ಮೂಲಕ ಸೂಚಿಸಿದ್ದರು. ಈ ವರ್ತನೆ ಸಹಜವಾಗಿಯೇ ವಿರಾಟ್ ಕೊಹ್ಲಿಯನ್ನು ಕೆಣಕುವಂತೆ ಮಾಡಿತ್ತು.

ಈ ಸಂದರ್ಭದಲ್ಲಿ ಮತ್ತೊಂದು ಪಂದ್ಯದ ವೇಳೆ ಮಾತಿಗೆ ಮಾತು ಬೆಳೆದು ವಾಗ್ದಾದ ಜೋರಾಯಿತು. ಇಬ್ಬರು ಕೂಡ ಪರಸ್ಪರ ಏರುದ್ವನಿಯಲ್ಲಿ ಮಾತನಾಡುತ್ತಿರುವುದು ಸ್ಪಷ್ಟವಾಗಿತ್ತು. ಇವರ ಈ ವರ್ತನೆಗೆ ದಂಡವನ್ನ ಕೂಡ ವಿಧಿಸಲಾಯಿತು.

https://twitter.com/LaljiPatel34/status/1654051801371672577?ref_src=twsrc%5Etfw%7Ctwcamp%5Etweetembed%7Ctwterm%5E1654051801371672577%7Ctwgr%5Edb4d6b53ae6cfca85b9dca4014aff282a4fb76e2%7Ctwcon%5Es1_&ref_url=https%3A%2F%2Fwww.india.com%2Fsports%2Fvirat-kohli-gautam-gambhir-gives-death-stare-after-fan-chants-kohli-kohli-post-lsg-vs-rcb-tie-in-ipl-2023-watch-6031640%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read