ಉಕ್ರೇನ್ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಉಕ್ರೇನ್ ನಲ್ಲಿ 21 ನಾಗರಿಕರು ಸಾವನ್ನಪ್ಪಿದ್ದು, 48 ಜನರಿಗೆ ಗಾಯಗಳಾಗಿವೆ.
ಖೇರ್ಖರ್ ಸಣ್ಣ ನಗರದ ವಸತಿ ಪ್ರದೇಶದ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ ಎಂದು ರಷ್ಯಾ ಸೇನೆಯ ವಿರುದ್ಧ ಅಧ್ಯಕ್ಷ ಝೆಲೆನ್ ಸ್ಕಿ ಗಂಭೀರ ಆರೋಪ ಮಾಡಿದ್ದಾರೆ. ದಾಳಿಯಲ್ಲಿ ರೈಲ್ವೆ ನಿಲ್ದಾಣ, ಪೆಟ್ರೋಲ್ ಬಂಕ್, ಕಟ್ಟಡಗಳು, ಹೈಪರ್ಮಾರ್ಕೆಟ್ ಗೆ ಹಾನಿಯಾಗಿದೆ ಎಂದು ಝೆಲೆನ್ ಸ್ಕಿ ತಿಳಿಸಿದ್ದಾರೆ.
ನಿನ್ನೆಯಷ್ಟೇ ಡ್ರೋಣ್ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಉಕ್ರೇನ್ ಪ್ರಯತ್ನ ನಡೆಸಿದೆ ಎಂದು ರಷ್ಯಾ ಆರೋಪ ಮಾಡಿತ್ತು. ಆದರೆ ಈ ಆರೋಪವನ್ನು ಉಕ್ರೇನ್ ಅಲ್ಲಗಳೆದಿತ್ತು. ಇದರ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾದಿಂದ ಕ್ಷಿಪಣಿ ದಾಳಿ ನಡೆಸಲಾಗಿದೆ.