ಅಮೆರಿಕದ ದಕ್ಷಿಣ ಕೆರೋಲಿನಾದ ಬೀದಿಗಳಲ್ಲಿ ಓಡಾಡುತ್ತಿದ್ದ ಬೃಹತ್ ಮೊಸಳೆಯೊಂದರ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಕಿಯಾವಾ ದ್ವೀಪದ ವಸತಿ ಪ್ರದೇಶವೊಂದರಲ್ಲಿ ಈ ದೈತ್ಯ ಮೊಸಳೆ ಕಾಣಿಸಿಕೊಂಡಿದೆ.
“ಅಲ್ಲಿ ನೋಡಿ! ಅದು ಡೈನೋಸಾರ್,” ಎಂದು ಈ ಮೊಸಳೆ ನೋಡಿದ ವ್ಯಕ್ತಿಯೊಬ್ಬರು ಉದ್ಗಾರ ತೆಗೆಯುತ್ತಿರುವುದನ್ನು ನೋಡಬಹುದಾಗಿದೆ. ತರೆಸಾ ಫಿಕಾ ಹೆಸರಿನ ವ್ಯಕ್ತಿ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಭಾರೀ ನಿಧಾನವಾಗಿ ರಸ್ತೆ ದಾಟುವ ಮೊಸಳೆ ಬದಿ ತಲುಪಿದಾಗ ಹಾಗೇ ವಿರಮಿಸುತ್ತದೆ. ಮೊಸಳೆಯನ್ನು ನೋಡಲು ಜನ ನೆರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.