ನನ್ನನ್ನು ಕ್ಷಮಿಸಿಬಿಡು, ಡಿವೋರ್ಸ್ ಕೊಡುವುದಿಲ್ಲ; ಜೈಲಿಂದ ರಾಖಿ ಸಾವಂತ್ ಗೆ ಗಂಡನ ಕರೆ

ಬಿಗ್ ಬಾಸ್ ಖ್ಯಾತಿಯ ನಟಿ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಯಾಗಿದ್ದು ತನ್ನ ಪತಿ ಆದಿಲ್ ಕ್ಷಮೆ ಕೇಳಿರೋದಾಗಿ ಹೇಳಿದ್ದಾರೆ. ಪಾಪರಾಜಿಗಳೊಂದಿಗೆ ಮಾತುಕತೆ ವೇಳೆ ಈ ರೀತಿ ರಾಖಿ ಸಾವಂತ್ ಹೇಳಿದ್ದು ವಿಡಿಯೋ ವೈರಲ್ ಆಗಿದೆ.

ಈ ವರ್ಷದ ಆರಂಭದಲ್ಲಿ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟ ತನ್ನ ಪತಿ ಆದಿಲ್ ಖಾನ್ ದುರಾನಿಯಿಂದ ವಿಚ್ಛೇದನ ಬಯಸಿರೋದಾಗಿ ನಟಿ ರಾಖಿ ಸಾವಂತ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ಪತಿ ಆದಿಲ್ ಖಾನ್ ಈಗಷ್ಟೇ ಫೋನ್ ಮಾಡಿದ್ದರು.

ಆದಿಲ್ ಜೈಲಿನಿಂದ ನನಗೆ ಕರೆ ಮಾಡಿ ಕ್ಷಮೆ ಕೇಳಿದ್ದಾನೆ. ನೀನು ಜೈಲಿನಿಂದ ಹೊರ ಬಂದ ಮೇಲೆ ನನಗೆ ವಿಚ್ಛೇದನ ಕೊಡು ಎಂದು ಹೇಳಿದ್ದೆ. ಆದರೆ ಅವರು ನನಗೆ ವಿಚ್ಛೇದನ ನೀಡುವುದಿಲ್ಲ ಎಂದು ಹೇಳಿದರು. ಅವನು ನನ್ನ ಜೀವನವನ್ನು ಹಾಳುಮಾಡಿದ್ದಾನೆ , ಈಗ ಕ್ಷಮೆ ಕೇಳುವುದರಿಂದ ಪ್ರಯೋಜನವಿಲ್ಲ ಎಂದು ಪಾಪರಾಜಿಗಳೊಂದಿಗೆ ರಾಖಿ ಸಾವಂತ್ ಹೇಳಿದ್ದಾರೆ.

ಕೆಲ ಕಾಲ ಪರಸ್ಪರ ಡೇಟಿಂಗ್ ನಡೆಸುತ್ತಿದ್ದ ರಾಖಿ ಮತ್ತು ಆದಿಲ್ ಕಳೆದ ವರ್ಷ ಮೇನಲ್ಲಿ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುಸ್ಲಿಂ ಸಂಪ್ರದಾಯದಂತೆ ಸಮಾರಂಭದಲ್ಲಿ ಆದಿಲ್ ನನ್ನು ವಿವಾಹವಾದ ನಂತರ ರಾಖಿ ಸಾವಂತ್ ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದರು.

ಆದರೆ ಕೆಲ ವಾರಗಳ ನಂತರ ರಾಖಿ ಕೆಲವು ಆಘಾತಕಾರಿ ಆರೋಪಗಳನ್ನು ಮಾಡಿ ಆದಿಲ್ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಕೌಟುಂಬಿಕ ಹಿಂಸೆಗೆ ಒಳಗಾಗಿರುವುದಾಗಿಯೂ ಆರೋಪಿಸಿದ್ದರು. ರಾಖಿ ಸಾವಂತ್ ದೂರಿನ ಮೇಲೆ ಫೆಬ್ರವರಿಯಲ್ಲಿ ಆದಿಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read