ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯ ಬ್ಯಾಗ್ ನಲ್ಲಿತ್ತು ಎರಡು ಹೆಬ್ಬಾವು…..! 03-05-2023 12:36PM IST / No Comments / Posted In: Latest News, India, Live News, Crime News ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಕ್ರಮ ಗಾಂಜಾ, ಅಕ್ರಮ ಚಿನ್ನ ಸಾಗಾಟ ಮುಂತಾದವು ಪತ್ತೆಯಾಗುವುದು ಸಾಮಾನ್ಯ. ಆದರೀಗ ಮಹಿಳಾ ಪ್ರಯಾಣಿಕೆಯ ಬ್ಯಾಗ್ ನಲ್ಲಿ ಪತ್ತೆಯಾಗಿರುವುದನ್ನು ಕಂಡು ಕಸ್ಟಮ್ಸ್ ಅಧಿಕಾರಿಗಳು ಅವಾಕ್ಕಾಗಿರುವ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೌದು, ಎರಡು ಹೆಬ್ಬಾವು, ಊಸರವಳ್ಳಿ ಸೇರಿದಂತೆ 22 ಹಾವುಗಳೊಂದಿಗೆ ಈ ಮಹಿಳೆ ಮಲೇಷ್ಯಾದ ಕೌಲಾಲಂಪುರ್‌ನಿಂದ ಬಂದಿಳಿದಿದ್ದಾಳೆ. ಮಹಿಳೆ ತನ್ನಲ್ಲಿದ್ದ ಉರಗಗಳನ್ನು ಮರೆಮಾಡಿದ್ದಳು. ಎರಡು ಎಂಟು ಅಡಿ ಉದ್ದದ ಹೆಬ್ಬಾವುಗಳು, ವಿವಿಧ ಜಾತಿಯ ಇತರ ಹಾವುಗಳು ಮತ್ತು ಊಸರವಳ್ಳಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಉದ್ದನೆಯ ರಾಡ್ ಬಳಸಿ ಹಾವನ್ನು ಹೊರತೆಗೆಯುತ್ತಿರುವುದನ್ನು ಕಾಣಬಹುದು. ಮಹಿಳಾ ಪ್ರಯಾಣಿಕಳ ಗುರುತು ಬಹಿರಂಗಗೊಂಡಿಲ್ಲವಾದರೂ, ಆಕೆ ಕೌಲಾಲಂಪುರದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ. ಮಹಿಳೆಯ ನಡೆಯಿಂದ ಅನುಮಾನಗೊಂಡ ಅಧಿಕಾರಿಗಳು ಆಕೆಯನ್ನು ತಡೆದು ಕೈಯಲ್ಲಿದ್ದ ಬ್ಯಾಗ್ ಗಳನ್ನು ಪರೀಕ್ಷಿಸಿದಾಗ ಸರೀಸೃಪಗಳಿರುವುದು ಪತ್ತೆಯಾಗಿದೆ. ಸರೀಸೃಪಗಳು ಮತ್ತು ಗೋಸುಂಬೆಗಳನ್ನು ಕಸ್ಟಮ್ಸ್ ಆಕ್ಟ್, 1962 ಆರ್/ಡಬ್ಲ್ಯೂ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಉರಗಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳ ಮೂಲಕ ವಿದೇಶಿ ಪ್ರಾಣಿಗಳು ಮತ್ತು ಸರೀಸೃಪಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯ ಇಂತಹ ಘಟನೆಗಳು ಕಂಡುಬಂದಿದೆ. ಈ ವರ್ಷದ ಜನವರಿಯಲ್ಲಿ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ಗಮನಿಸದ ಎರಡು ಚೀಲಗಳನ್ನು ವಶಪಡಿಸಿಕೊಂಡಿತ್ತು, ಅದರಲ್ಲಿ ಅವರು 45 ಹೆಬ್ಬಾವುಗಳು, ಮೂರು ಮಾರ್ಮೊಸೆಟ್‌ಗಳು, ಮೂರು ನಕ್ಷತ್ರ ಆಮೆಗಳು ಮತ್ತು ಎಂಟು ವಿಭಿನ್ನ ಹಾವುಗಳನ್ನು ರಕ್ಷಿಸಿದ್ದರು. On 28.04.23, a female pax who arrived from Kuala Lumpur by Flight No. AK13 was intercepted by Customs.On examination of her checked-in baggage, 22 Snakes of various species and a Chameleon were found & seized under the Customs Act, 1962 r/w Wildlife Protection act, 1972 pic.twitter.com/uP5zSYyrLS — Chennai Customs (@ChennaiCustoms) April 29, 2023